ಕರ್ನಾಟಕ

karnataka

ದೇಶದಲ್ಲಿ 26 ಸಾವಿರ ಹೊಸ ಸೋಂಕಿತರು ಪತ್ತೆ; ಉತ್ತರಾಖಂಡದ ಆರೋಗ್ಯ ಕಾರ್ಯದರ್ಶಿಗೆ ಕೊರೊನಾ

By

Published : Dec 16, 2020, 10:14 AM IST

ದೇಶದಲ್ಲಿ ಸೋಂಕಿತರ ಸಂಖ್ಯೆ 99,32,548 ಹಾಗೂ ಮೃತರ ಸಂಖ್ಯೆ 1,44,096ಕ್ಕೆ ಏರಿಕೆಯಾಗಿದ್ದು, ನಿನ್ನೆ 33,813 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಉತ್ತರಾಖಂಡ್‌ ರಾಜ್ಯದ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,382 ಹೊಸ ಸೋಂಕಿತರು ಪತ್ತೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26,382 ಹೊಸ ಸೋಂಕಿತರು ಪತ್ತೆ

ನವದೆಹಲಿ:ಕಳೆದ 24 ಗಂಟೆಗಳಲ್ಲಿ 26,382 ಸೋಂಕಿತರು ಪತ್ತೆಯಾಗಿದ್ದು, 387 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 99,32,548 ಹಾಗೂ ಮೃತರ ಸಂಖ್ಯೆ 1,44,096ಕ್ಕೆ ಏರಿಕೆಯಾಗಿದೆ.

ಓದಿ: ಕರ್ನಾಟಕದ ಗೋ ಹತ್ಯೆ ವಿಧೇಯಕ ಅಂಗೀಕರಿಸದಂತೆ ತಡೆಯಲು ಗೋವಾ ವ್ಯಾಪಾರಿಗಳ ಮನವಿ

ನಿನ್ನೆ 33,813 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದು, ಒಟ್ಟು ಸೋಂಕಿತರ ಪೈಕಿ ಇದುವರೆಗೆ 94,56,449 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇನ್ನೂ 3,32,002 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಡಿಸೆಂಬರ್ 15ರವರೆಗೆ 15,66,46,280 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,85,625 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details