ನವದೆಹಲಿ:ಭಾರತದಲ್ಲಿ ಕೊರೊನಾ ವೈರಸ್ 3 ತಿಂಗಳ ಕಾಲ ಇರಲಿದೆ. ಆದರೆ, ಶೀಘ್ರದಲ್ಲೇ ಅದು ರೂಪಾಂತರ ಆಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾ.ಆರ್.ಗಂಗಾಕೇಡ್ಕರ್ ತಿಳಿಸಿದ್ದಾರೆ.
ಭಾರತದಲ್ಲಿ 3 ತಿಂಗಳ ಕಾಲ ಇರುತ್ತೆ ಕೋವಿಡ್! ಐಸಿಎಂಆರ್ ಹೇಳಿದ್ದೇನು? - ಭಾರತದಲ್ಲಿ 3 ತಿಂಗಳ ಕಾಲ ಇರುತ್ತೆ ಕೋವಿಡ್
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾ.ಆರ್.ಗಂಗಾಕೇಡ್ಕರ್,ಭಾರತದಲ್ಲಿ ಕೊರೊನಾ ವೈರಸ್ 3 ತಿಂಗಳ ಕಾಲ ಇರಲಿದೆ. ಆದರೆ, ಶೀಘ್ರದಲ್ಲೇ ಅದು ರೂಪಾಂತರ ಆಗುವುದಿಲ್ಲ ಎಂದು ಹೇಳಿದರು.
ಡಾ.ಆರ್.ಗಂಗಾಕೇಡ್ಕರ್
ದೆಹಲಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಯಾವೆಲ್ಲಾ ವ್ಯಾಕ್ಸಿನ್‌ಗಳನ್ನು ಸಂಶೋಧಿಸಲಾಗಿದಿಯೋ ಅವೆಲ್ಲವನ್ನೂ ವೈರಾಣು ತಡೆಗಟ್ಟುವ ಸಲುವಾಗಿ ಭವಿಷ್ಯದಲ್ಲಿ ಮತ್ತಷ್ಟು ಬಲಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೋವಿಡ್-19 ತಡೆಗೆ ಬಿಸಿಜಿ ವ್ಯಾಕ್ಸಿನ್ ಬಳಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಗಂಗಾಕೇಡ್ಕರ್, ಮುಂದಿನ ವಾರ ಐಸಿಎಂಆರ್ ಕೋವಿಡ್ ಕುರಿತು ಸಂಶೋಧನೆ ಆರಂಭಿಸಲಿದೆ. ವ್ಯಾಕ್ಸಿನ್ ಕುರಿತು ಈವರೆಗೆ ಯಾವುದೇ ರೀತಿಯ ಸ್ಪಷ್ಟವಾದ ಫಲಿತಾಂಶಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.