ಕರ್ನಾಟಕ

karnataka

ETV Bharat / bharat

ಪೆಟ್ಲಾಬುರ್ಜ್ ಆಸ್ಪತ್ರೆಯಲ್ಲಿ ವೈದ್ಯರು ಸೇರಿ 32 ಜನರಿಗೆ ಕೋವಿಡ್​ ಪಾಸಿಟಿವ್..! - Hyderabad Covid Update

ಹೈದರಾಬಾದ್​ನ ಪ್ರತಿಷ್ಠಿತ ಪೆಟ್ಲಾಬುರ್ಜ್ ಹೆರಿಗೆ ಆಸ್ಪತ್ರೆಯಲ್ಲಿ ಮತ್ತೆ 30 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 32 ಆಗಿದೆ.

Covid positive for 32 people at Petlaburj Hospital, Hyderabad
ಹೈದರಾಬಾದ್​ನ ಪೆಟ್ಲಾಬುರ್ಜ್ ಆಸ್ಪತ್ರೆಯಲ್ಲಿ 32 ಜನರಿಗೆ ಕೋವಿಡ್​ ಪಾಸಿಟಿವ್

By

Published : Jun 16, 2020, 1:52 PM IST

ಹೈದರಾಬಾದ್ : ನಗರದ ಪೆಟ್ಲಾಬುರ್ಜ್ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನೈರ್ಮಲ್ಯ ಸಿಬ್ಬಂದಿ ಸೇರಿ ಒಟ್ಟು 32 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಈ ಮೊದಲು ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಸೋಂಕು ತಗುಲಿತ್ತು, ಇತ್ತೀಚಿನ ವರದಿ ಪ್ರಕಾರ ಮತ್ತೆ 12 ಜನ ವೈದ್ಯರು ಮತ್ತು 18 ಜನ ಸ್ವಚ್ಚತಾ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಈ ಮೂಲಕ ಆಸ್ಪತ್ರೆಯಲ್ಲಿ 32 ಜನರಿಗೆ ಸೋಂಕು ಬಾಧಿಸಿದಂತಾಗಿದೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.

ಎಲ್ಲ ಸೋಂಕಿತರನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details