ನವದೆಹಲಿ: ಆಯುರ್ವೇದ ಮತ್ತು ಯೋಗ ಆಧಾರಿತ ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೊಟೊಕಾಲ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
'ಆಯುರ್ವೇದ ಮತ್ತು ಯೋಗ ಆಧಾರಿತ ಪ್ರೋಟೋಕಾಲ್ ಶ್ಲಾಘನೀಯ ಪ್ರಯತ್ನ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಆರೋಗ್ಯಕರವಾಗಿರಲು ಮತ್ತು ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸಲು ಒತ್ತು ನೀಡುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶಗಳಿಗಾಗಿ ಆಯುರ್ವೇದ ಮತ್ತು ಯೋಗದ ಮೊರೆ ಹೋಗಲಾಗುತ್ತಿದೆ.
ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್ಗಳನ್ನು ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಆಯುಷ್ ಸಚಿವಾಲಯದ ಶ್ರೀಪಾದ್ ನಾಯಕ್ ಬಿಡುಗಡೆ ಮಾಡಿದರು.
ಈ ಹಿಂದೆ ಕೋವಿಡ್-19 ವಿರುದ್ಧದ ನಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಂತರ್ ಶಿಕ್ಷಣ ಸಮಿತಿಯ ವರದಿ ಮತ್ತು ಶಿಫಾರಸುಗಳ ಪ್ರಕಾರ ತಜ್ಞರು ಮತ್ತು ಇತರ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಕೋವಿಡ್-19 ನಿರ್ವಹಣೆಗೆ ಪ್ರೋಟೋಕಾಲ್ ಸಿದ್ಧಪಡಿಸಿವೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್-19 ರ ತಗ್ಗಿಸುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಹಸ್ತಕ್ಷೇಪದ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಆಯುಷ್ ಸಚಿವಾಲಯವು ಅನೇಕ ಕ್ಲಿನಿಕಲ್, ವೀಕ್ಷಣಾ ಅಧ್ಯಯನಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.