ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿತ ಪತ್ನಿ ಚಿಕಿತ್ಸೆಗೆ 29 ಲಕ್ಷ ರೂ. ಬಿಲ್​... ಆದರೂ ಆಕೆ ಬದುಕಲಿಲ್ಲ ಎಂದು ಪತಿ ಅಳಲು - ಕೊರೊನಾ ಸೋಂಕಿತೆಯ ಚಿಕಿತ್ಸೆಗೆ 29 ಲಕ್ಷ ಬಿಲ್

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಪತ್ನಿಯ ಚಿಕಿತ್ಸೆಗೆ ಸುಮಾರು 29 ಲಕ್ಷ ರೂಪಾಯಿ ಬಿಲ್​ ಆಗಿದೆ. ಆದರೂ ನನ್ನ ಪತ್ನಿ ಬದುಕಲಿಲ್ಲ. ಆಸ್ಪತ್ರೆಯಿಂದ ನನಗೆ ಅನ್ಯಾಯವಾಗಿದೆ ಎಂದು ಪತಿಯೊಬ್ಬ ಅಳಲು ತೋಡಿಕೊಂಡಿದ್ದಾನೆ.

covid patient bill 29 lakh
ಕೊರೊನಾ ಸೋಂಕಿತ ಮಹಿಳೆ ಚಿಕಿತ್ಸೆಗೆ 29 ಲಕ್ಷ ಬಿಲ್

By

Published : Sep 4, 2020, 2:40 PM IST

ಮೆಹಬೂಬ್​ನಗರ(ತೆಲಂಗಾಣ): ಕೋವಿಡ್ ಸೋಂಕಿಗೆ ತುತ್ತಾಗಿದ್ದ ಮಹಿಳೆಯನ್ನು ಸುಮಾರು 20 ದಿನಗಳ ಕಾಲ ಐಸಿಯುನಲ್ಲಿ ಇರಿಸಿದ್ದ ಖಾಸಗಿ ಆಸ್ಪತ್ರೆ ವೈದ್ಯರು ಸುಮಾರು 29 ಲಕ್ಷ ರೂಪಾಯಿ ಬಿಲ್​ ಮಾಡಿದ್ದರು. ಆದರೆ ಇಷ್ಟೆಲ್ಲ ಖರ್ಚು ಮಾಡಿದರೂ ಮಹಿಳೆ ಮೃತಪಟ್ಟಿದ್ದಾಳೆ.

ಮೆಹಬೂಬ್‌ನಗರ ಜಿಲ್ಲೆಯ ಗಂಡೀದ್ ಮಂಡಲದ ಬಲ್ಸುರುಗೊಂಡದ ವ್ಯಕ್ತಿವೋರ್ವರ ಪತ್ನಿ ಗರ್ಭಿಣಿಯಾಗಿದ್ದು, ಜುಲೈ 27 ರಂದು ಸಣ್ಣ ಜ್ವರದಿಂದ ಮೆಹಬೂಬ್‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಾತ್ರೆಗಳನ್ನು ನೀಡಿ ಮನೆಗೆ ಕಳುಹಿಸಲಾಗಿತ್ತು. ನಂತರ ಜುಲೈ 29 ರಂದು ಆಕೆಯನ್ನು ಕೊಸ್ಗಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆಗೆ ಜ್ವರ ಕಡಿಮೆಯಾಗಲಿಲ್ಲ.

ಆಗಸ್ಟ್ 3 ರಂದು ಮೆಹಬೂಬ್‌ನಗರದ ಖಾಸಗಿ ಆಸ್ಪತ್ರೆಗೆ ಹೆರಿಗೆಗಾಗಿ ಕರೆದೊಯ್ಯುತ್ತಿದ್ದಂತೆ, ಕೆಮ್ಮಿನಿಂದ ಬಳಲುತ್ತಿದ್ದ ಮಹಿಳೆ ಕಾರಣ ಕೋವಿಡ್ ಪರೀಕ್ಷೆಗೆ ಸೂಚಿಸಿದ್ದಾರೆ. ವರದಿ ಕೂಡ ನೆಗೆಟಿವ್ ಬಂದಿದೆ. ಆಕೆಯನ್ನು ಹೆರಿಗೆಗಾಗಿ ಆಗಸ್ಟ್ 4 ರಂದು ಹೈದರಾಬಾದಿನ ಕಾರ್ಪೊರೇಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸೋಂಕಿತೆಯ ಕುಟುಂಬವು 2 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದು, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಹೆರಿಗೆಯಾದ ಎರಡು ದಿನಗಳ ನಂತರ, ಸೋಂಕಿತೆಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಆದರೆ ವರದಿ ತೋರಿಸದ ವೈದ್ಯರು ಸೋಂಕು ತಗುಲಿದೆ ಎಂದಿದ್ದಾರೆ. ಆಗಸ್ಟ್ 12 ರಂದು ಆಕೆಯನ್ನು ಐಸಿಯುಗೆ ಕರೆದೊಯ್ದಿದ್ದಾರೆ.

ಆಕೆಯ ಪರಿಸ್ಥಿತಿ ಚೆನ್ನಾಗಿದೆ ಎಂದು ವೈದ್ಯರು ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಸೋಂಕಿತೆಯ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆಕೆಯನ್ನು 20 ದಿನಗಳ ಕಾಲ ಐಸಿಯುನಲ್ಲಿ ಇರಿಸಲಾಗಿತ್ತು. ಕೊನೆಗೆ ವ್ಯಕ್ತಿ ತನ್ನ ಹೆಂಡತಿಯನ್ನು ತೋರಿಸುವಂತೆ ವೈದ್ಯರನ್ನು ಒತ್ತಾಯಿಸಿದಾಗ ಬುಧವಾರ ಮಧ್ಯಾಹ್ನ ಪಿಪಿಇ ಕಿಟ್ ನೀಡಿ ಐಸಿಯುಗೆ ಕಳುಹಿಸಲಾಯಿತು. ಪತ್ನಿ ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ಪತಿ ದೂರಿದ್ದಾರೆ.

ಇತರ ವೈದ್ಯರ ಅಭಿಪ್ರಾಯಕ್ಕಾಗಿ ತನ್ನ ಪತ್ನಿಯ ವರದಿಗಳನ್ನು ನೀಡುವಂತೆ ಕೇಳಿಕೊಂಡ ನಂತರ ಗುರುವಾರ ಬೆಳಗ್ಗೆ ಸೋಂಕಿತೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯು ಘೋಷಿಸಿದೆ ಎಂದು ಆಕೆಯ ಪತಿ ಆರೋಪಿಸಿದ್ದಾರೆ.

ಪತ್ನಿಯ ಚಿಕಿತ್ಸೆಗಾಗಿ ಸುಮಾರು 29 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾರೆ. ತನ್ನ ಪತ್ನಿ ಹೇಗೆ ನಿಧನರಾದರು ಎಂದರೆ ವೈದ್ಯರು ಏನನ್ನೂ ಹೇಳುತ್ತಿಲ್ಲ ಎಂದು ಪತಿ ಆರೋಪಿಸಿದ್ದಾರೆ. ಹೈದರಾಬಾದ್ ಡಿಎಂಹೆಚ್‌ಒಗೆ ಆಸ್ಪತ್ರೆಯ ಬಗ್ಗೆ ದೂರು ನೀಡಿದ್ದರಿಂದ ಆಸ್ಪತ್ರೆಯ ಆಡಳಿತದಿಂದ 4 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಪತಿ ಹೇಳಿದ್ದಾರೆ.

ABOUT THE AUTHOR

...view details