ಕರ್ನಾಟಕ

karnataka

ETV Bharat / bharat

ಬಿಹಾರ ವಿಧಾನಸಭೆ ಚುನಾವಣೆ ಮುಂದೂಡಲು ಕೋವಿಡ್​​​ ಮಾನ್ಯವಾದ ಕಾರಣವಲ್ಲ: ಸುಪ್ರೀಂಕೋರ್ಟ್ - ಚುನಾವಣೆ ಮುಂದೂಡಲು ಕೋವಿಡ್-19 ಮಾನ್ಯವಾದ ಕಾರಣವಲ್ಲ

ಬಿಹಾರ ವಿಧಾನಸಭೆ ಚುನಾವಣೆಯನ್ನು ಮುಂದೂಡಲು ಕೋವಿಡ್ -19 ಮಾನ್ಯವಾದ ಕಾರಣವಲ್ಲ ಎಂದು ಸುಪ್ರೀಂಕೋರ್ಟ್ ಭಿಪ್ರಾಯಪಟ್ಟಿದೆ.

Approach EC for postponing Bihar elections: SC
ಸುಪ್ರೀಂಕೋರ್ಟ್

By

Published : Aug 28, 2020, 1:25 PM IST

ನವದೆಹಲಿ:ಕೋವಿಡ್ ಸಾಂಕ್ರಾಮಿಕದ ಮಧ್ಯೆ ಬಿಹಾರ ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಈ ಬಗ್ಗೆ ಅರ್ಜಿದಾರರು ಭಾರತದ ಚುನಾವಣಾ ಆಯೋಗವನ್ನು ಸಂಪರ್ಕಿಸುವಂತೆ ಹೇಳಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯ ಪೀಠವು, ಕೋವಿಡ್-19 ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಅಕ್ಟೋಬರ್​ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿತು.

ರಾಜ್ಯವು ಪ್ರವಾಹದಿಂದ ನಲುಗಿದೆ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಚುನಾವಣಾ ಆಯೋಗವು ಎಲ್ಲಾ ಸಂದರ್ಭಗಳನ್ನು ನೋಡಿಕೊಳ್ಳುತ್ತದೆ ಮತ್ತು ಅವರು ಕಾಳಜಿ ವಹಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಇನ್ನೂ ಅಧಿಸೂಚನೆ ಹೊರಡಿಸದ ಕಾರಣ ಇದು ಅಕಾಲಿಕ ಅರ್ಜಿಯಾಗಿದೆ ಮತ್ತು ಚುನಾವಣೆಯನ್ನು ಮುಂದೂಡಲು ಕೋವಿಡ್ -19 ಮಾನ್ಯ ಕಾರಣವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಫೆಬ್ರವರಿಯವರೆಗೆ ಅಥವಾ ಬಿಹಾರವನ್ನು ಕೋವಿಡ್-19 ಮತ್ತು ಪ್ರವಾಹ ಮುಕ್ತ ಎಂದು ಘೋಷಿಸುವವರೆಗೆ ಚುನಾವಣೆಯ ಅಧಿಸೂಚನೆಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿತ್ತು.

ABOUT THE AUTHOR

...view details