ಕೋವಿಡ್-19 ನಿಂದ ಎದುರಾದ ಅರೋಗ್ಯ ಸಮಸ್ಯೆಯು ದೇಶದ ಹಲವಾರು ರಾಜ್ಯಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಿದೆ. ಮೊದಲೇ ಆರ್ಥಿಕ ಕೊರತೆಯಿಂದ ಬಳಲುತ್ತಿದ್ದ ರಾಜ್ಯಗಳಿಗೆ ಕೋವಿಡ್ ಬಿಕ್ಕಟ್ಟು ದೊಡ್ಡ ಹೊಡೆತವನ್ನೇ ನೀಡಿದೆ. ರಾಜ್ಯಗಳ ಮೇಲಾದ ಕೋವಿಡ್ ಬಿಕ್ಕಟ್ಟಿನ ಪರಿಣಾಮವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಅವು:
- ಜಿವಿಎ-ನಿವ್ವಳ ಮೌಲ್ಯವರ್ಧನೆ
- ಕಾರ್ಮಿಕ ಮಾರುಕಟ್ಟೆ
- ವಿತ್ತೀಯ ಸ್ಥಿತಿ
ದೇಶದ ಜಿಡಿಪಿಗೆ ಬಹುದೊಡ್ಡ ಪಾಲು ನೀಡುವ ಮಹಾರಾಷ್ಟ್ರವು ಕೋವಿಡ್ನಿಂದ ಅತಿ ಹೆಚ್ಚು ಬಾಧಿತವಾಯಿತು. ಜನತೆ ಒಬ್ಬರಿಗೊಬ್ಬರು ಹತ್ತಿರವಾಗಿ ಕೆಲಸ ಮಾಡುವ ಕಾರ್ಮಿಕ ಮಾರುಕಟ್ಟೆಯು ಇದರಿಂದ ಅತಿ ಹೆಚ್ಚು ಕುಸಿತ ಕಂಡಿತು.
ಇನ್ನು ತಮಿಳುನಾಡು ಹಾಗೂ ಕೇರಳಗಳಲ್ಲಿ ಕಟ್ಟಡ ನಿರ್ಮಾಣ ವಲಯವು ಅತಿ ಹೆಚ್ಚು ಸಂಕಷ್ಟಕ್ಕೀಡಾಯಿತು. ಹಾಗೆಯೇ ಗುಜರಾತ್ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳ ಉತ್ಪಾದನಾ ವಲಯಕ್ಕೂ ಹೊಡೆತ ಬಿದ್ದಿದ್ದು, ಈ ಹೊಡೆತದಿಂದ ಅವು ಬೇಗನೆ ಚೇತರಿಸಿಕೊಳ್ಳುವುದು ಕಷ್ಟವಾಗಿದೆ.
ವಿತ್ತೀಯ ಸ್ಥಿತಿ, ಕಾರ್ಮಿಕ ಮಾರುಕಟ್ಟೆ ಮೇಲೆ ಕೋವಿಡ್ ಪರಿಣಾಮ; ಭೌಗೋಳಿಕ ವಿಶ್ಲೇಷಣೆ