ಮುಂಬೈ(ಮಹಾರಾಷ್ಟ್ರ): ಜುಲೈ 11ರಂದು ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಮಗಳು ಆರಾಧ್ಯ, ಪತಿ ಅಭಿಷೇಕ್ ಮತ್ತು ಮಾವ ಅಮಿತಾಬ್ ಬಚ್ಚನ್‌ಗೆ ಕೋವಿಡ್ ದೃಢವಾದ ಹಿನ್ನೆಲೆ ಐಶ್ವರ್ಯ ಹಳೆಯ ಸ್ನೇಹಿತ ನಟ ವಿವೇಕ್ ಒಬೆರಾಯ್, ಅವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಭಾನುವಾರ ಹಾರೈಸಿದರು.
ಅಮಿತಾಬ್ ಬಚ್ಚನ್ ಕುಟುಂಬದ ಚೇತರಿಕೆಗೆ ಪ್ರಾರ್ಥಿಸಿದ ನಟ ವಿವೇಕ್ ಒಬೆರಾಯ್ - ನಟ ವಿವೇಕ್ ಒಬೆರಾಯ್
ಶನಿವಾರ ತಡರಾತ್ರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೊರೊನಾ ವೈರಸ್ ತಗುಲಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಭಾನುವಾರ, ಇಡೀ ಕುಟುಂಬವು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ಈ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಜಯಾ ಬಚ್ಚನ್ ವರದಿ ನೆಗೆಟಿವ್ ಬಂದಿದೆ..
ಮಾಜಿ ಪ್ರಿಯತಮೆ ಹಾಗೂ ಕುಟುಂಬದ ಚೇತರಿಕೆಗೆ ಪ್ರಾರ್ಥಿಸಿದ ವಿವೇಕ್ ಒಬೆರಾಯ್
ಶನಿವಾರ ತಡರಾತ್ರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೊರೊನಾ ವೈರಸ್ ತಗುಲಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಭಾನುವಾರ, ಇಡೀ ಕುಟುಂಬವು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ಈ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಜಯಾ ಬಚ್ಚನ್ ವರದಿ ನೆಗೆಟಿವ್ ಬಂದಿದೆ.
"ಕುಟುಂಬದ ಯೋಗಕ್ಷೇಮ ಮತ್ತು ತ್ವರಿತ ಚೇತರಿಕೆಗಾಗಿ ನಮ್ಮ ಪ್ರಾರ್ಥನೆಗಳು" ಎಂದು ವಿವೇಕ್ ಭಾನುವಾರ ರಾತ್ರಿ ಟ್ವೀಟ್‌ನಲ್ಲಿ ಬರೆದಿದ್ದಾರೆ. ಹಾಗೇ ಪ್ರತ್ಯೇಕ ಟ್ವೀಟ್‌ನಲ್ಲಿ ಅವರು, ಅಮಿತಾಬ್ ಮತ್ತು ಅಭಿಷೇಕ್ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಬರೆದುಕೊಂಡಿದ್ದಾರೆ.
Last Updated : Jul 13, 2020, 8:40 PM IST