ಕೋಲ್ಕತಾ(ಪಶ್ಚಿಮಬಂಗಾಳ) :ಇಲ್ಲಿನ ಸಂಶೋಧಕರ ಗುಂಪೊಂದು ಕಂಡುಹಿಡಿದ ಅತ್ಯಂತ ಕಡಿಮೆ ಬೆಲೆಯ ಕೋವಿಡ್-19 ಪರೀಕ್ಷಾ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಈ ಕಿಟ್ಗಳನ್ನು ಕೊರೊನಾ ಪರೀಕ್ಷೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.
DiAGSure nCOV-19 Detection Assay ಎಂಬ ಕಿಟ್‌ನ ಕೋಲ್ಕತ್ತಾದ ಸಂಶೊಧಕರು ಕಂಡುಹಿಡಿದಿದ್ದಾರೆ. ದೇಶಾದ್ಯಂತ ಪರೀಕ್ಷಾ ಸಾಧನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನಿರ್ದಿಷ್ಟ ಮಟ್ಟಿಗೆ ಪೂರೈಸಬಲ್ಲದು ಎಂದು ಹೇಳಲಾಗಿದೆ. ಸುಮಾರು 500 ರೂ.ಗಳ ಬೆಲೆಯುಳ್ಳ ಈ ಕಿಟ್ 90 ನಿಮಿಷಗಳ ಅಲ್ಪಾವಧಿಯಲ್ಲಿ ವೈರಸ್‌ನ ಪತ್ತೆಹಚ್ಚುವಲ್ಲಿ ಶೇ.100ರಷ್ಟು ನಿಖರತೆ ಪ್ರದರ್ಶಿಸಿದೆ ಎಂದು ಐಸಿಎಂಆರ್ ವರದಿ ಉಲ್ಲೇಖಿಸಿದೆ.