ಹೈದರಾಬಾದ್ (ತೆಲಂಗಾಣ): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೇ 7ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಿಸುವ ಸಾಧ್ಯತೆ ಇದೆ. ಕ್ಯಾಬಿನೆಟ್ ಸಭೆ ಮುಗಿದ ನಂತರ ನಿರ್ಧಾರವನ್ನು ಅಧಿಕೃತಗೊಳಿಸಲಾಗುತ್ತದೆ ಎನ್ನಲಾಗುತ್ತಿದೆ.
ಅಸ್ತಿತ್ವದಲ್ಲಿರುವ ಕಂಟೈನ್ಮೆಂಟ್ ವಲಯಗಳ ನಿಗಾ ಅವಧಿಯು ಮೇ 7ಕ್ಕೆ ಪೂರ್ಣಗೊಳಿಸಲಾಗುತ್ತದೆ. ಕೋವಿಡ್-19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಆನ್‌ಲೈನ್ ಮತ್ತು ಮನೆ ಬಾಗಿಲಿಗೆ ಆಹಾರ ಪದಾರ್ಥಗಳ ವಿತರಣೆ ಮತ್ತು ಪಾರ್ಸಲ್ ಮೇಲೆ ನಿಷೇಧ ಹೇರಲು ಪ್ರಸ್ತಾವಿತ ಮಾರ್ಗಸೂಚಿಗಳನ್ನು ಕೆಸಿಆರ್ ನಿರ್ಧರಿಸಿದ್ದಾರೆ.