ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳು ಉಂಟಾಗಿವೆ. ಹೀಗಾಗಿ ಇತ್ತೀಚೆಗೆ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಸಿಬಿಎಸ್ಇ ವಿಸ್ತರಿಸಿದೆ.
ಲಾಕ್ಡೌನ್ ಇರುವ ಹಿನ್ನೆಲೆ ಕೆಲವು ವಿಭಾಗಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲು ಸಿಬಿಎಸ್ಇ ಅನುಮೋದನೆ ನೀಡಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರು, ನವೀಕರಿಸುವವರು, 2021-22ಕ್ಕೆ ಅಂಗಸಂಸ್ಥೆಯ ವಿಸ್ತರಣೆ ಮಾಡುವವರಿಗೆ ಜೂನ್ 30, 2020ರವರೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.