ಮುಂಬೈ:ಡೆಡ್ಲಿ ವೈರಸ್ ಕೊರೊನಾ ವಿರುದ್ಧ ಹೋರಾಡಲು ಎಲ್ಲರೂ ಒಂದಾಗುತ್ತಿದ್ದು, ತಮ್ಮ ಕೈಯಿಂದ ಆದಷ್ಟು ಆರ್ಥಿಕ ಸಹಾಯ ಮಾಡಿ ರಕ್ಕಸ ವೈರಸ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟ: ರಿಲಯನ್ಸ್ 500 ಕೋಟಿ ರೂ, ಇನ್ಫೋಸಿಸ್ನಿಂದ 100 ಕೋಟಿ ರೂ. ದೇಣಿಗೆ! - ಕೊರೊನಾ ವೈರಸ್
ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಧನ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದು, ಇದೀಗ ರಿಲಯನ್ಸ್, ಇನ್ಪೋಸಿಸ್ ಕೂಡ ಇದಕ್ಕೆ ಕೈ ಜೋಡಿಸಿವೆ.
ಈಗಾಗಲೇ ಪ್ರಧಾನಿ ಮೋದಿ ಮನವಿಗೆ ಅನೇಕ ಕಂಪನಿಗಳು ಸ್ಪಂದಿಸಿ ಹಣ ದೇಣಿಗೆ ನೀಡಿದ್ದು, ಇದೀಗ ರಿಲಯನ್ಸ್ 500ಕೋಟಿ ರೂ ದೇಣಿಗೆ ನೀಡಿದೆ. ಪಿಎಂ ಕೇರ್ಸ್ ನಿಧಿಗೆ ಹಣ ನೀಡಿರುವುದಾಗಿ ರಿಲಯನ್ಸ್ ಹೇಳಿದ್ದು, ಇದರ ಜತೆಗೆ ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳಿಗೆ ತಲಾ 5 ಕೋಟಿ ರೂ ನೀಡಿರುವ ವಿಷಯವನ್ನ ಟ್ವಿಟ್ಟರ್ನಲ್ಲಿ ಹಾಕಿಕೊಂಡಿದೆ.
ಇನ್ಫೋಸಿಸ್ ಕಂಪನಿ ಕೂಡ ಒಟ್ಟು 100 ಕೋಟಿ ರೂ ದೇಣಿಗೆ ನೀಡಿದ್ದು, 50 ಕೋಟಿ ರೂ ಪ್ರಧಾನಿ ಮೋದಿಯವರ ಪಿಎಂ ಕೇರ್ಸ್ ನಿಧಿಗೆ ಹಾಗೂ ಉಳಿದ ಹಣ ಜನರ ಸಹಾಯಕ್ಕಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ ಕಂಪನಿ ಬರೋಬ್ಬರಿ 15 ಸಾವಿರ ಕೋಟಿ ರೂ ದೇಣಿಗೆ ನೀಡಿದೆ.