ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಕೋವಿಡ್​ ಚೇತರಿಕೆ ಪ್ರಮಾಣ ಶೇ. 39.62ಕ್ಕೆ ಏರಿಕೆ: ಆರೋಗ್ಯ ಸಚಿವಾಲಯ ಮಾಹಿತಿ - ಭಾರತದಲ್ಲಿ ಕೋವಿಡ್​ ಚೇತರಿಕೆ ಪ್ರಮಾಣ ಏರಿಕೆ

ಲಾಕ್ ಡೌನ್ ಆರಂಭದಲ್ಲಿ ಶೇ.7.1ರಷ್ಟಿದ್ದ ಭಾರತದ ಕೋವಿಡ್​ ಚೇತರಿಕೆ ಪ್ರಮಾಣ ಈಗ 39.62ಕ್ಕೆ ಏರಿಕೆ ಆಗಿದೆ. ಇದು ತೃಪ್ತಿದಾಯಕ ವಿಷಯ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.

COVID-19 recovery rate improves to 39.62 per cent: Health Ministry
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್

By

Published : May 21, 2020, 9:10 AM IST

ನವದೆಹಲಿ: ಭಾರತದ ಕೋವಿಡ್​-19 ಚೇತರಿಕೆ ಪ್ರಮಾಣ ಇತರ ರಾಷ್ಟ್ರಗಳಿಗಿಂತ ಉತ್ತಮವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್​​ವಾಲ್, ಸದ್ಯ ದೇಶದಲ್ಲಿ ಶೇ. 39.62 ಅಂದರೆ 42,298 ಜನ ಚೇತರಿಸಿಕೊಂಡಿದ್ದು, ತೃಪ್ತಿದಾಯಕವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಲಾಕ್ ‌ಡೌನ್ ಪ್ರಾರಂಭವಾದಾಗ ಚೇತರಿಕೆ ಪ್ರಮಾಣ ಶೇ. 7.1 ರಷ್ಟಿತ್ತು, ಎರಡನೇ ಲಾಕ್‌ ಡೌನ್ ಸಮಯದಲ್ಲಿ ಚೇತರಿಕೆ ಪ್ರಮಾಣ ಶೇ. 11.42 ರಷ್ಟಿತ್ತು, ನಂತರ ಅದು 26.59 ಕ್ಕೆ ಏರಿಕೆಯಾಗಿತ್ತು. ಈಗ ಚೇತರಿಕೆ ಪ್ರಮಾಣ ಶೇ. 39.62 ಇದೆ ಎಂದು ಎಂದು ಅಗರ್​ವಾಲ್ ತಿಳಿಸಿದ್ದಾರೆ.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ನೋಡಿದರೆ, ಪ್ರತಿ ಲಕ್ಷ ಜನಸಂಖ್ಯೆಗೆ 62 ಜನರು ಕೋವಿಡ್​ ಬಾಧಿತರಾಗಿದ್ದಾರೆ. ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಶೇ. 7.9 ಜನ ಕೋವಿಡ್​ ಬಾಧಿತರಾಗಿದ್ದಾರೆ. ಜಾಗತಿಕ ಅಂಕಿ ಅಂಶ 4.2 ಕ್ಕೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ 0.2 ಇದೆ. ಇದು ಕಳವಳಕಾರಿ ಸಂಗತಿಯಾದರೂ, 6 ದೇಶಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details