ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿ ಪೊಲೀಸರ ಪರವಾಗಿ ನಿಂತಿರುವ ಭಾರತೀಯ ರೈಲ್ವೆ ಇಲಾಖೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನಿತ್ಯ 10,000 ನೀರಿನ ಬಾಟಲ್ ಒದಗಿಸುವ ವ್ಯವಸ್ಥೆ ಮಾಡುತ್ತಿದೆ.
ಭಾರತೀಯ ರೈಲ್ವೆ ತನ್ನ ಪಿಎಸ್‌ಯು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ನೆರವಿನಿಂದ ದೆಹಲಿಯಲ್ಲಿ ಏಪ್ರಿಲ್ 16ರಿಂದ ದಿನಕ್ಕೆ 10,000 ರೈಲ್ ನೀರಿನ ಬಾಟಲಿಗಳನ್ನು ಉಚಿತವಾಗಿ ವಿತರಿಸಲು ಆರಂಭಿಸಿದೆ.
ಬೇಸಿಗೆಯಲ್ಲಿ ಬಿಸಿಯಾದ ವಾತಾವರಣ ಬೇಸರದ ಪರಿಸ್ಥಿತಿಗಳನ್ನು ಉಂಟುಮಾಡುತ್ತದೆ. ಪೊಲೀಸ್ ಸಿಬ್ಬಂದಿ ಗಡಿಯಾರದ ಮುಳ್ಳಿನಂತೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತಹ ಸವಾಲಿನ ವೇಳಯಲ್ಲಿ ವಿವಿಧ ಸ್ಥಳಗಳಲ್ಲಿ ವೈದ್ಯರು ಮತ್ತು ಅರೆವೈದ್ಯರ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ಹೇಳಿದೆ.