ಕರ್ನಾಟಕ

karnataka

ETV Bharat / bharat

ಆಸ್ಪತ್ರೆಯಿಂದ ಕೋವಿಡ್​ ಸೋಂಕಿತ ಕೈದಿಗಳು ಎಸ್ಕೇಪ್ - ಹೈದರಾಬಾದ್​ನ ಗಾಂಧಿ ಆಸ್ಪತ್ರೆ

ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ನಾಲ್ವರು ಕೈದಿಗಳು ನಾಪತ್ತೆಯಾಗಿದ್ದಾರೆ.

Covid-19 prisoners missing from Hyderabad hospital
ಕೋವಿಡ್​ ಸೋಂಕಿತ ಕೈದಿಗಳು ಎಸ್ಕೇಪ್

By

Published : Aug 27, 2020, 4:18 PM IST

ಹೈದರಾಬಾದ್​: ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್​ ಚಿಕಿತ್ಸೆ ಪಡೆಯುತ್ತಿದ್ದ ತೆಲಂಗಾಣದ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದ ನಾಲ್ವರು ಕೈದಿಗಳು ಪರಾರಿಯಾಗಿದ್ದಾರೆ.

ಸೋಂಕು ತಗುಲಿರುವುದು ದೃಢವಾದ ಬಳಿಕ ಈ ಕೈದಿಗಳನ್ನು ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯ 2ನೇ ಮಹಡಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ನಸುಕಿನ ಜಾವ 3 ಗಂಟೆಯಿಂದ ಕೈದಿಗಳು ಕಾಣಿಸುತ್ತಿಲ್ಲ.

ಆಸ್ಪತ್ರೆಯ ಕಟ್ಟಡವು ಏಳು ಮಹಡಿಗಳನ್ನು ಹೊಂದಿದ್ದು, ಪ್ರತಿ ಹಂತದಲ್ಲೂ ಭದ್ರತಾ ಪರಿಶೀಲನೆ ಇದೆ. ಆದಾಗ್ಯೂ ಕೈದಿಗಳು ತಪ್ಪಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರೆಸಿದ್ದೇವೆ ಎಂದು ಗೋಪಾಲಪುರಂನ ಸಹಾಯಕ ಪೊಲೀಸ್ ಆಯುಕ್ತ ಪಿ.ವೆಂಕಟ ರಮಣ ತಿಳಿಸಿದ್ದಾರೆ.

ABOUT THE AUTHOR

...view details