ಮುಂಬೈ:ಕ್ವಾರಂಟೈನ್ ಕೇಂದ್ರದಲ್ಲಿ 40 ವರ್ಷದ ಕೋವಿಡ್ ರೋಗಿಯ ಮೇಲೆ 25 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು - ಕ್ವಾರಂಟೈನ್ ಕೇಂದ್ರದಲ್ಲಿ ಅತ್ಯಾಚಾರ
ಕ್ವಾರಂಟೈನ್ ಕೇಂದ್ರದಲ್ಲಿ 40 ವರ್ಷದ ಕೋವಿಡ್ ರೋಗಿಯ ಮೇಲೆ 25 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಆತನಿಗೆ ಆ್ಯಂಟಿಜೆನ್ ಟೆಸ್ಟ್ ನಡೆಸಿದಾಗ ಕೋವಿಡ್ 19 ಇರುವುದು ದೃಢಪಟ್ಟಿದೆ. ಆದರೂ ಆರೋಪಿಯ ಸ್ವ್ಯಾಬ್ ಮಾದರಿ ತೆಗೆದುಕೊಂಡು ಲ್ಯಾಬ್ಗೆ ಕಳುಹಿಸಲಾಗಿದೆ.
ಪನ್ವೆಲ್‌ನ ಕೋನ್ ಗ್ರಾಮದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ 40 ವರ್ಷದ ಮಹಿಳೆ ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳಿಗೆ ದೂರು ನೀಡಿದ್ದರು. ಮಹಿಳೆ ದೂರು ಆಧರಿಸಿ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ.
ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ರಜಪೂತ್ ಮಾತನಾಡಿ, ಆರೋಪಿಯ ಸ್ವ್ಯಾಬ್ ಮಾದರಿ ತೆಗೆದುಕೊಂಡು ಲ್ಯಾಬ್ಗೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ಆದರೆ ಆತನಿಗೆ ಆ್ಯಂಟಿಜೆನ್ ಟೆಸ್ಟ್ ನಡೆಸಿದಾಗ ಕೋವಿಡ್ 19 ಇರುವುದು ದೃಢಪಟ್ಟಿದೆ. ಹೀಗಾಗಿ ನಾವು ಆರೋಪಿಯನ್ನ ಬಂಧಿಸಿಲ್ಲ. ಸೂಕ್ತ ಭದ್ರತೆಯೊಂದಿಗೆ ಆರೋಪಿಯನ್ನ ಕ್ವಾರಂಟೈನ್ ಕೇಂದ್ರದಲ್ಲೇ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.