ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಮತ್ತೆ ಐವರಿಗೆ ಕೊರೊನಾ ಸೋಂಕು; ದೃಢಪಡಿಸಿದ ಆರೋಗ್ಯ ಸಚಿವೆ - ಕೊರೊನಾವೈರಸ್‌

ಕೇರಳದಲ್ಲಿ ಹೊಸದಾಗಿ ಐದು ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ತಿಳಿಸಿದ್ದಾರೆ.

corona
ಕೊರೊನಾ

By

Published : Mar 8, 2020, 12:50 PM IST

ತಿರುವನಂತಪುರಂ: ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ತಿಳಿಸಿದ್ದಾರೆ.

ಈ ಐದು ಮಂದಿ ಸೋಂಕಿತರು ಪಥನಮತ್ತಟ್ಟ ಜಿಲ್ಲೆಯವರೆಂದು ತಿಳಿದು ಬಂದಿದೆ. ಇವರಲ್ಲಿ ಮೂವರು ಫೆಬ್ರವರಿ 29 ರಂದು ಇಟಲಿಯಿಂದ ಹಿಂದಿರುಗಿದ್ದರೆ, ಇನ್ನಿಬ್ಬರು ಅವರ ಸಂಬಂಧಿಕರು ಎಂದು ಸಚಿವೆ ತಿಳಿಸಿದ್ದಾರೆ. ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದು ವೈದ್ಯರು ವಿಶೇಷ ನಿಗಾ ವಹಿಸಿದ್ದಾರೆ.

ABOUT THE AUTHOR

...view details