ಕರ್ನಾಟಕ

karnataka

ETV Bharat / bharat

ಕೋವಿಡ್-19 ಲಸಿಕೆ, ಸಂಭಾವ್ಯ ಚಿಕಿತ್ಸೆ ಸಂಶೋಧನೆ: 16 ಔಷಧೀಯ ಕಂಪನಿಗಳನ್ನು ಒಟ್ಟುಗೂಡಿಸಿದ NIH - 16 ಔಷಧೀಯ ಕಂಪನಿಗಳನ್ನು ಒಟ್ಟುಗೂಡಿಸಿದ NIH

ಮಹಾಮಾರಿ ಕೊರೊನ ಸೋಂಕಿಗೆ ಲಸಿಕೆ ಮತ್ತು ಸಂಭಾವ್ಯ ಚಿಕಿತ್ಸೆಯ ಅಭಿವೃದ್ಧಿಯನ್ನು ತ್ವರಿತಗೊಳಿಸಲು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಸಂಶೋಧಕರು ಮತ್ತು 16 ಔಷಧೀಯ ಕಂಪನಿಗಳನ್ನು ಒಟ್ಟುಗೂಡಿಸಲು ತೀರ್ಮಾನಿಸಿದೆ.

NIH announces efforts to accelerate development of vaccine and treatment
16 ಔಷಧೀಯ ಕಂಪನಿಗಳನ್ನು ಒಟ್ಟುಗೂಡಿಸಿದ NIH

By

Published : Apr 20, 2020, 2:11 PM IST

ಹೈದರಾಬಾದ್: ಪ್ರಪಂಚದಾದ್ಯಂತ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೊನಾ ಸೋಂಕಿಗೆ ಸಂಭಾವ್ಯ ಚಿಕಿತ್ಸೆ ಮತ್ತು ಲಸಿಕೆಗಳ ಅಭಿವೃದ್ಧಿಯನ್ನು ವೇಗಗೊಳಿಸುವ ಸಲುವಾಗಿ, ಸಂಶೋಧಕರು ಮತ್ತು 16 ಔಷಧೀಯ ಕಂಪನಿಗಳನ್ನು ಒಟ್ಟುಗೂಡಿಸಲು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆ ವೇಗಗೊಳಿಸುವುದು ಮತ್ತು ಹೆಚ್ಚಿನ ಸಮಯದ ಸಾಮರ್ಥ್ಯವನ್ನು ಹೊಂದಿರುವ ಔಷಧಗಳು ಮತ್ತು ಲಸಿಕೆಗಳ ಬಗ್ಗೆ ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದೆ.

'ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಸಹಾಯ ಮಾಡುವ ಅತ್ಯಂತ ಭರವಸೆಯ ಲಸಿಕೆ ಮತ್ತು ಚಿಕಿತ್ಸಕಗಳ ಅಭಿವೃದ್ಧಿಯನ್ನು ತ್ವರಿತವಾಗಿ ಮುನ್ನಡೆಸಲು ಅನಿವಾರ್ಯ ಮತ್ತು ವಸ್ತುನಿಷ್ಠತೆಯೊಂದಿಗೆ ಸೇರಿಕೊಳ್ಳುವ ಸಮಯ ಇದಾಗಿದೆ' ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಿರ್ದೇಶಕ ಫ್ರಾನ್ಸಿಸ್ ಕಾಲಿನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಹಯೋಗದ ನೇತೃತ್ವವನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆ ವಹಿಸಿಕೊಳ್ಳಿದೆ. ಆರೋಗ್ಯ ಮತ್ತು ಮಾನವ ಸೇವೆಗಳ ಕಚೇರಿಯ ಸಹಾಯಕ ಕಾರ್ಯದರ್ಶಿ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ, ಅಮೆರಿಕ ಆಹಾರ ಮತ್ತು ಔಷಧಿ ಆಡಳಿತ ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ಕೋವಿಡ್-19 ಸಂಯುಕ್ತಗಳನ್ನು ಪರೀಕ್ಷಿಸಲು ಸಂಶೋಧಕರು ಬಳಸುತ್ತಿರುವ ವಿಧಾನಗಳು ಮತ್ತು ಮಾದರಿಗಳನ್ನು ಇದು ಪ್ರಮಾಣೀಕರಿಸುತ್ತದೆ. ಉನ್ನತ ಮಟ್ಟದ ಪ್ರಯೋಗಾಲಯ ಸೌಲಭ್ಯಗಳನ್ನು ಸಂಶೋಧಕರಿಗೆ ನೀಡಲಾಗುವುದು. ಅಂತಿಮವಾಗಿ, ಇದು ಎಲ್ಲಾ ಕ್ಲಿನಿಕಲ್ ಟ್ರಯಲ್​ಗಳನ್ನು ಹಂಚಿಕೊಳ್ಳಲು ಒಂದು ಜಂಟಿ ನಿಯಂತ್ರಣ ವೇದಿಕೆ ಸ್ಥಾಪಿಸಿದಂತಾಗುತ್ತದೆ ಎಂದು ಎನ್ಐಹೆಚ್ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ ಔಷಧಿಗೆ ಆದ್ಯತೆ ನೀಡಬೇಕು ಮತ್ತು ಯಾವ ಔಷಧಿಗಳನ್ನು ಮಾಡಬಾರದು ಎಂಬುದನ್ನು ನಿರ್ಧರಿಸಲು ಸಹ ಇದು ಸಹಾಯ ಮಾಡುತ್ತದೆ.

ABOUT THE AUTHOR

...view details