ಕರ್ನಾಟಕ

karnataka

ETV Bharat / bharat

8 ಲಕ್ಷದ ಸನಿಹದಲ್ಲಿ ಸೋಂಕಿತರು: ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳು ಇಳಿಕೆ... ವಜ್ರದ ಉದ್ಯಮಿ ಆತ್ಮಹತ್ಯೆ! - ಭಾರತದಲ್ಲಿ ಕೋವಿಡ್ 19 ಸುದ್ದಿ

ಕೊರೊನಾ ಪ್ರಕರಣಗಳ ಏರಿಕೆಯ ಹೊರತಾಗಿಯೂ ದೆಹಲಿಯಲ್ಲಿ ಕೋವಿಡ್​-19 ಸಕ್ರಿಯ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿದೆ. ದೆಹಲಿ ಆರೋಗ್ಯ ಇಲಾಖೆಯ ಪ್ರಕಾರ, ಜುಲೈ ಮೊದಲ 9 ದಿನಗಳಲ್ಲಿ ಕೊರೊನಾದ ಸಕ್ರಿಯ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

COVID-19
ಕೋವಿಡ್

By

Published : Jul 10, 2020, 9:17 PM IST

ಹೈದರಾಬಾದ್: 1.3 ಶತಕೋಟಿ ಜನಸಂಖ್ಯೆಯ ಹೊರತಾಗಿಯೂ ಭಾರತವು ಕೋವಿಡ್​-19ಅನ್ನು ಉತ್ತಮವಾಗಿ ನಿಭಾಯಿಸಲು ಸಮರ್ಥವಾಗಿದೆ. ಪ್ರತಿ ಮಿಲಿಯನ್ ಜನಸಂಖ್ಯೆಯ ಪ್ರಕರಣಗಳು ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಸರ್ಕಾರ ಹೇಳಿಕೊಂಡು ಬರುತ್ತಿದೆ. ಇದರ ನಡುವೆ ಒಟ್ಟು ಸೋಂಕಿತರ ಸಂಖ್ಯೆ 8 ಲಕ್ಷದ ಸನಿಹ ಬಂದು ತಲುಪಿದೆ.

ಕೊರೊನಾ ವೈರಸ್​ ಪ್ರಕರಣಗಳ ಏರಿಕೆಯ ಹೊರತಾಗಿಯೂ ದೆಹಲಿಯಲ್ಲಿ ಕೋವಿಡ್​-19 ಸಕ್ರಿಯ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿದೆ. ದೆಹಲಿ ಆರೋಗ್ಯ ಇಲಾಖೆಯ ಪ್ರಕಾರ, ಜುಲೈ ಮೊದಲ 9 ದಿನಗಳಲ್ಲಿ ಕೊರೊನಾದ ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

ದೇಶದಲ್ಲಿನ ಕೋವಿಡ್ ಸೋಂಕಿತರ ಅಂಕಿ-ಅಂಶ

ಜುಲೈ 1ರಂದು ದೆಹಲಿಯಲ್ಲಿ 27,007 ಸಕ್ರಿಯ ಪ್ರಕರಣಗಳು ಕಂಡು ಬಂದಿದ್ದು, ಜುಲೈ 9ರಂದು ಅದು 21,567ಕ್ಕೆ ಇಳಿದಿದೆ. ಜುಲೈ 1ರಿಂದ ಜುಲೈ 9ರವರೆಗೆ ದೆಹಲಿಯಲ್ಲಿ ಒಟ್ಟು 5440 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ. ಈ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ವೇಗವಾಗಿ ಕಡಿಮೆಯಾಗಿದೆ.

ದೆಹಲಿ ಸರ್ಕಾರದ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದೆ. ನಿರ್ಣಾಯಕ ಹಾಗೂ ಗಂಭೀರ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದೆ.

ಗುಜರಾತ್‌ನ ಸೂರತ್‌ ನಗರದ ವಜ್ರ ವ್ಯಾಪಾರಿಯೊಬ್ಬರು ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಒಂದು ದಿನದ ಬಳಿಕ ಶುಕ್ರವಾರ ರೈಲು ಹಳಿ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನ್‌ಪುರದ ನಿವಾಸಿ ಕುಮಾರ್ಪಾಲ್ ಷಾ (63) ಚಲಿಸುವ ರೈಲಿನ ಮುಂದೆ ಹಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಜಾರ್ಖಂಡ್‌ನಲ್ಲಿ ಕೋವಿಡ್-19ನಿಂದ ಬಾಧಿತರಾದ 99 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಜಾರ್ಖಂಡ್‌ನ ಸಾಹಿಬ್‌ಗಂಜ್‌ನ ದ್ರೌಪದಿ ದೇವಿ ಸೋಂಕಿಗೆ ಒಳಗಾಗಿದ್ದು, ಕೋವಿಡ್​-19 ಆಸ್ಪತ್ರೆಯ ರಾಜಮಹಲ್ ಉಪ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಒಡಿಶಾದಲ್ಲಿ ಒಂದೇ ದಿನ ಅತಿ ಹೆಚ್ಚು ಕೋವಿಡ್​ ಚೇತರಿಕೆ ದಾಖಲಾಗಿದ್ದು, 565 ರೋಗಿಗಳು ಡಿಸ್ಚಾರ್ಜ್​ ಆಗಿದ್ದಾರೆ. ಒಡಿಶಾದಲ್ಲಿ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 7972ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details