ಹೈದರಾಬಾದ್: ಭಾರತವು ಶುಕ್ರವಾರ 24 ಗಂಟೆಗಳಲ್ಲಿ 20,903 ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ. ಈ ಹೊಸ ಪ್ರಕರಣಗಳೊಂದಿಗೆ, ಭಾರತದ ಕೊರೊನಾ ಸೋಂಕಿತರ ಸಂಖ್ಯೆ 6,25,544 ಕ್ಕೆ ಏರಿದೆ. ಅದರಲ್ಲಿ 2,27,439 ಸಕ್ರಿಯ ಪ್ರಕರಣಗಳಾಗಿದ್ದರೆ, 3,79,891 ರೋಗಿಗಳು ಗುಣಮುಖರಾಗಿದ್ದಾರೆ.
ನವದೆಹಲಿ: ಜನರ ಮತ್ತು ಸರ್ಕಾರದ ಸಂಘಟಿತ ಪ್ರಯತ್ನದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ. ಜೂನ್ 23 ರಂದು, ರಾಜಧಾನಿ 3,947 ಪ್ರಕರಣಗಳಲ್ಲಿ ಗರಿಷ್ಠ ಏಕದಿನ ಮಟ್ಟವನ್ನು ಕಂಡಿದೆ. ಆದರೆ ಅಂದಿನಿಂದ ಸೋಂಕಿತರ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗಿದೆ.
ಬಿಹಾರ: ಪಾಟ್ನಾ ಜಿಲ್ಲೆಯ ಪಾಲಿಗಂಜ್ ಉಪವಿಭಾಗದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅತಿದೊಡ್ಡ ಸೋಂಕಿನ ಸರಪಳಿಯನ್ನು ಹೊರಹಾಕಿದ ವಧುವಿನ ತಂದೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ವರನು ವೈರಸ್ ಸೋಂಕಿನಿಂದ ಮೃತಪಟ್ಟನು. ಕೊರೊನಾ ಪರೀಕ್ಷೆಗೆ ಒಳಪಡಿಸದೆ ಅಂತ್ಯಕ್ರಿಯೆ ಮಾಡಲಾಯಿತು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಸರಿಯಾದ ಕೊರೊನಾ ಪ್ರೋಟೋಕಾಲ್‌ಗಳನ್ನು ಅನುಸರಿಸದೆ ಸುಮಾರು 50 ಜನರು ಮದುವೆಗೆ ಹಾಜರಾಗಿದ್ದಾರೆ ಎಂಬ ಆರೋಪವಿದೆ. ಏತನ್ಮಧ್ಯೆ, ಸಮುದಾಯ ಪ್ರಸರಣದ ಸಾಧ್ಯತೆಯನ್ನು ನಿಯಂತ್ರಿಸುವ ಉದ್ದೇಶದಿಂದ, ಎಲ್ಲಾ ದೇವಾಲಯಗಳು ಆಗಸ್ಟ್ 4 ರವರೆಗೆ ಮುಚ್ಚಲ್ಪಡುತ್ತವೆ ಎಂದು ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಕೌನ್ಸಿಲ್ ತಿಳಿಸಿದೆ.
ರಾಜಸ್ಥಾನ: ಪ್ರತಾಪಗಢ ಜಿಲ್ಲೆಯ ಜಿಲ್ಲಾ ಜೈಲಿಗೆ ನಿಕಟ ಸಂಬಂಧ ಹೊಂದಿರುವ ಪ್ರಕರಣಗಳಲ್ಲಿ ತೀವ್ರತೆಯನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ಒಂದೇ ದಿನದಲ್ಲಿ 31 ಹೊಸ ಪ್ರಕರಣಗಳು ವರದಿಯಾಗಿವೆ.
ಪ್ರಕರಣಗಳ ಉಲ್ಬಣದ ನಂತರ, ಆರೋಗ್ಯ ಇಲಾಖೆ ಎಲ್ಲಾ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಉಷ್ಣ ತಪಾಸಣೆ ನಡೆಸುತ್ತಿದೆ. ಪ್ರತ್ಯೇಕ ವಾರ್ಡ್ ರಚಿಸಲು ಮತ್ತು ಕೆಲವು ಜೈಲು ಕೋಶಗಳಿಂದ ದ್ವಿತೀಯ ಸಂಪರ್ಕಿತರನ್ನು ಸ್ಥಳಾಂತರಿಸಲು ಇಲಾಖೆ ಯೋಜಿಸುತ್ತಿದೆ. ಜೈಲು ಸಂಕೀರ್ಣವನ್ನು ಸೀಲ್ಡೌನ್ ಮಾಡಲಾಗಿದೆ.
ಕರ್ನಾಟಕ : ಸಿಬ್ಬಂದಿಯ ಕೊರೊನಾ ಪಾಸಿಟಿವ್ ವರದಿ ಬಂದ ನಂತರ ಆನಂದ್ ರಾವ್ ಸರ್ಕಲ್‌ನಲ್ಲಿರುವ ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ. ವರದಿಗಳ ಪ್ರಕಾರ, ಆಯುಕ್ತರ ಕಾರ್ ಚಾಲಕನ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಮುಂದಿನ 24 ಗಂಟೆಗಳ ಕಾಲ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ. ಕಚೇರಿ ಆವರಣವನ್ನು ಸ್ವಚ್ಛಗೊಳಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.