ಹೈದರಾಬಾದ್:ದೇಶಾದ್ಯಂತ ಇದೀಗ ಅನ್ಲಾಕ್ 2.0 ಗೈಡ್ಲೈನ್ ಬಿಡುಗಡೆಯಾಗೊಂಡಿದೆ. ಈ ನಡುವೆ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೇ ಇರುವುದು ಆತಂಕ ಮೂಡಿಸಿದೆ.
ಕಳೆದ 24 ಗಂಟೆಯಲ್ಲಿ 18,522 ಕೋವಿಡ್ ಕೇಸ್ಗಳು ಹೊಸದಾಗಿ ದಾಖಲಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 5,66,840 ಆಗಿದೆ. ಇಂದು 418 ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 16,893ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 2,15,125 ಆ್ಯಕ್ಟೀವ್ ಕೇಸ್ಗಳಿದ್ದು, 3,34,821 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೆಹಲಿಯಲ್ಲಿ ಕೊರೊನಾ ಹರಡುವಿಕೆ ಜೋರಾಗಿರುವ ಕಾರಣ ದೆಹಲಿಯ ಎಎಪಿ ಸರ್ಕಾರ 500 ಬೆಡ್ಗಳ ಕೇರ್ ಸೆಂಟರ್ಅನ್ನು ಕಾಮನ್ವೆಲ್ತ್ ಗೇಮ್ ಗ್ರಾಮದಲ್ಲಿ ನಿರ್ಮಿಸಿದೆ. ನಾಳೆಯಿಂದ ಕಿಲ್ ಕರೊನಾ ಕ್ಯಾಂಪೇನ್ ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರತಿದಿನ 15ರಿಂದ 20 ಸಾವಿರ ಸ್ಯಾಂಪಲ್ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದೆ.
ರಾಜ್ಯವಾರು ಚಿತ್ರಣ ಇಂತಿದೆ
ತೆಲಂಗಾಣ: ಇಂದು ಹೊಸದಾಗಿ 946 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್ನಲ್ಲೇ 896 ಕೇಸ್ಗಳು ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟು ಸಂಖ್ಯೆ 16,339 ಆಗಿದೆ.
ಮಹಾರಾಷ್ಟ್ರ:ದಿನದಿಂದ ದಿನಕ್ಕೆ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಇಂದು ಒಂದೇ ದಿನ 4,878 ಹೊಸ ಕೇಸ್ ಹಾಗೂ 245 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 1,74,761 ಒಟ್ಟು ಕೇಸ್ಗಳಿದ್ದು, ಸಾವಿನ ಸಂಖ್ಯೆ 7,855 ಆಗಿದೆ. ಇದರಲ್ಲಿ 75,979 ಆ್ಯಕ್ಟೀವ್ ಕೇಸ್ಗಳಿದ್ದು, 90,911 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.