ಕರ್ನಾಟಕ

karnataka

ETV Bharat / bharat

ಕೊರೊನಾ ಪೀಡಿತ ಕ್ಯಾನ್ಸರ್​ ರೋಗಿಗಳಿಗೆ ಥೆರಪಿ ಚಿಕಿತ್ಸೆಗಳು ಪ್ರಭಾವ ಬೀರಲ್ಲ.. ಅಧ್ಯಯನದಿಂದ ಸಾಬೀತು

ಕೊರೊನಾ ಪೀಡಿತ ಕ್ಯಾನ್ಸರ್​​ ರೋಗಿಗಳಿಗೆ ಥೆರಪಿ ಚಿಕಿತ್ಸೆಗಳು ಪರಿಣಾಮ ಬೀರಲು ಸಾಧ್ಯವೇ ಎಂಬುದರ ಬಗ್ಗೆ ಅಧ್ಯನವೊಂದನ್ನ ಮಾಡಲಾಗಿದ್ದು, ಈ ಅಧ್ಯನದ ಪ್ರಕಾರ ಕ್ಯಾನ್ಸರ್​ ಚಿಕಿತ್ಸೆಗಳು ಪ್ರಭಾವ ಬೀರುವುದಿಲ್ಲ ಎಂಬುದು ಸಾಬೀತಾಗಿದೆ.

By

Published : Jun 10, 2020, 6:43 PM IST

COVID-19 mortality in cancer
ಸಾಂದರ್ಭಿಕ ಚಿತ್ರ

ಹೈದರಾಬಾದ್​(ತೆಲಂಗಾಣ) :ಕೊರೊನಾ ರೋಗದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳಲ್ಲಿನ ಮರಣ ಪ್ರಮಾಣವನ್ನು ಕಂಡುಹಿಡಿಯಲು ಬರ್ಮಿಂಗ್​ಹ್ಯಾಮ್​​ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಅಧ್ಯಯನ ನಡೆಸಿವೆ.

ಈ ಅಧ್ಯಯನವನ್ನು ಯುಕೆ ಕೊರೊನಾ ವೈರಸ್ ಕ್ಯಾನ್ಸರ್ ಮಾನಿಟರಿಂಗ್ ಪ್ರಾಜೆಕ್ಟ್ (ಯುಕೆಸಿಸಿಎಂಪಿ) ಎಂಬ ಸಮಿತಿಯನ್ನು ರಚಿಸಿ, ಮಾರ್ಚ್‌ನಲ್ಲಿ ಪ್ರಾರಂಭಿಸಲಾಗಿತ್ತು. ಈ ಸಮಿತಿ ಕ್ಯಾನ್ಸರ್​ ಬಾಧಿತ ಕೊರೊನಾ ರೋಗಿಗಳ ಅಧ್ಯಯನ ನಡೆಸಿ, ಕೊರೊನಾ ಪೀಡಿತ ರೋಗಿಗಳಿಗೆ ಕ್ಯಾನ್ಸರ್​ಗೆ ಈಗಾಗಲೇ ನೀಡುತ್ತಿರುವ ಔಷಧಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ವರದಿ ನೀಡಿದೆ.

ಕೀಮೋಥೆರಪಿ ಅಥವಾ ರೇಡಿಯೊಥೆರಪಿ, ಇಮ್ಯುನೊಥೆರಪಿ ಅಥವಾ ಹಾರ್ಮೋನುಗಳ ಚಿಕಿತ್ಸೆಯಂತಹ ಇತರ ಸಕ್ರಿಯ ಕ್ಯಾನ್ಸರ್ ಚಿಕಿತ್ಸೆಯು ಕ್ಯಾನ್ಸರ್ ರೋಗಿಗಳಲ್ಲಿ ಹೇಗೆ ಪ್ರಭಾವಿಸಿದೆ ಎಂಬುದನ್ನು ಮೌಲ್ಯಮಾಪನ ಮಾಡಲು ಈ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಈ ಅಧ್ಯಯನದಲ್ಲಿ ತೊಡಗಿಕೊಂಡ ವೈದ್ಯರು, ತಾವು ಮಾಡಿದ ಅಧ್ಯಯನದ ವೈದ್ಯಕೀಯ ಫಲಿತಾಂಶವನ್ನು ವರದಿ ಮಾಡಿದ್ದಾರೆ. ಈ ಅಧ್ಯಯನದಲ್ಲಿ ಸುಮಾರು 55 ಕ್ಯಾನ್ಸರ್ ಕೇಂದ್ರಗಳು ತೊಡಗಿಕೊಂಡಿವೆ. ಮೊದಲ 800 ಕೊರೊನಾ ಪೀಡಿತ ಕ್ಯಾನ್ಸರ್ ರೋಗಿಗಳ ಫಲಿತಾಂಶಗಳನ್ನು ವಿಶ್ಲೇಷಿಸಿದೆ.

ಈ 800 ರೋಗಿಗಳ ಪೈಕಿ 169 ಕೊರೊನಾ ಪೀಡಿತ ಕ್ಯಾನ್ಸರ್ ರೋಗಿಗಳನ್ನು ಹೊರತುಪಡಿಸಿದ್ರೆ, ಇನ್ನುಳಿದ ಯಾವ ರೋಗಿಯಲ್ಲೂ ಸಹ ಥೆರಪಿ ಚಿಕಿತ್ಸೆಗಳಿಂದಾಗಿ ಫಲಿತಾಂಶಗಳು ಕಂಡು ಬಂದಿಲ್ಲ. ಕ್ಯಾನ್ಸರ್​ ಚಿಕಿತ್ಸೆಯ ನಂತರವೂ ಸಹ 631 ರೋಗಿಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯರಕ್ತನಾಳದ ಕಾಯಿಲೆ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಕಾಣಿಸುತ್ತಿತ್ತು ಎಂದು ವರದಿ ಮಾಡಿವೆ.

ABOUT THE AUTHOR

...view details