ಹೈದರಾಬಾದ್: ಜಾಗತಿಕ ಬಿಕ್ಕಟ್ಟು ಸೃಷ್ಟಿಸಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಲಸೆ ಕಾರ್ಮಿಕರ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದ್ದರೂ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಕಾಲ್ನಡಿಗೆ ಮೂಲಕ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇದು ಮುಂದಿನ ದಿನಗಳಲ್ಲಿ ಆರ್ಥಿಕತೆಗೆ ಬಲವಾದ ಪೆಟ್ಟು ನೀಡಲಿದೆ ಎಂದು ವಿಶ್ವಸಂಸ್ಥೆಯ ಮಾದಕ ವಸ್ತು ಮತ್ತು ಅಪರಾಧ ಕುರಿತ ವಿಶ್ವಸಂಸ್ಥೆ ಸಂಘಟನೆ (ಯುಎನ್‌ಒಡಿಸಿ) ಹೇಳಿದೆ. ವಲಸಿಗರು, ನಿರಾಶ್ರಿತರ ಜೀವಕ್ಕೆ ಕೊರೊನಾ ಹೆಚ್ಚು ಅಪಾಯ ಉಂಟು ಮಾಡುತ್ತಿದೆ. ಹೀಗಾಗಿ, ಸೋಂಕು ಪೀಡಿತ ದೇಶಗಳಿಂದ ನಿರ್ದಿಷ್ಟ ತಾಣಗಳಿಗೆ (ತವರುಗಳತ್ತ) ಹೆಜ್ಜೆ ಹಾಕುತ್ತಿರುವ ವಲಸಿಗರ ಕಳ್ಳಸಾಗಣೆ ದಿನದಿಂದ ದಿನ ಏರುತ್ತಲೇ ಇದೆ.
ಲಾಕ್ಡೌನ್ನ ಕಟ್ಟುನಿಟ್ಟಾದ ನಿರ್ಬಂಧಗಳ ನಡುವೆಯೂ ಮೆಡಿಟರೇನಿಯನ್, ಸಬ್ ಸಹಾರನ್ ಆಫ್ರಿಕನ್, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಷ್ಯನ್ ಪ್ರದೇಶಗಳಲ್ಲಿ ಪಲಾಯನ ಮಾಡುತ್ತಿರುವವರ ಸಂಖ್ಯೆ ಅಗಾಧವಾಗಿದೆ. ಇದು ಕೊರೊನಾ ಮತ್ತಷ್ಟು ಹರಡುವ ಅಪಾಯವನ್ನೂ ಸೂಚಿಸುತ್ತದೆ ಎಂದು ಸಂಘಟನೆ ಹೇಳಿದೆ.