ಕರ್ನಾಟಕ

karnataka

ETV Bharat / bharat

ಕೋವಿಡ್​ ಸಂಕಷ್ಟ: ಇದೇ ಮೊದಲ ಸಲ ಮೊಬೈಲ್​ ಆ್ಯಪ್​​ ಮೂಲಕ ಸಂಸದರು ಅಟೆಂಡೆನ್ಸ್​! - ಸೆಪ್ಟೆಂಬರ್​​ 14ರಿಂದ ಸಂಸತ್​​ ಚಳಿಗಾಲದ ಅಧಿವೇಶನ

ಕೊರೊನಾ ಹಾವಳಿ ನಡುವೆ ಸೆಪ್ಟೆಂಬರ್​​ 14ರಿಂದ ಸಂಸತ್​ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಆ್ಯಪ್​ ಮೂಲಕ ಹಾಜರಾತಿ ದಾಖಲು ಮಾಡುವ ಆ್ಯಪ್​ ತಯಾರು ಮಾಡಲಾಗಿದೆ.

Lok Sabha
Lok Sabha

By

Published : Sep 10, 2020, 9:53 PM IST

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್​ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಸೆಪ್ಟೆಂಬರ್​​ 14ರಿಂದ ಸಂಸತ್​​ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ.

ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು, ಅಧಿವೇಶನಕ್ಕೆ ಹಾಜರಾಗುವ ಪ್ರತಿ ಸಂಸದರೂ ಕೊರೊನಾ ವೈರಸ್​ ಟೆಸ್ಟ್​ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದರ ಮಧ್ಯೆ ಸಂಸದರು ಇದೇ ಮೊದಲ ಸಲ ಮೊಬೈಲ್​ ಆ್ಯಪ್​ ಮೂಲಕ ತಮ್ಮ ಅಟೆಂಡೆನ್ಸ್​​ ಹಾಕಲಿದ್ದಾರೆ.

ಅಟೆಂಡೆನ್ಸ್​​​​​​ ರಿಜಿಸ್ಟರ್​​ ಆ್ಯಪ್​ ಎಂಬ ಮೊಬೈಲ್​ ಆ್ಯಪ್​​ ಸಿದ್ಧಗೊಳಿಸಲಾಗಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರ ಈ ಆ್ಯಪ್​ ವಿನ್ಯಾಸಗೊಳಿಸಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಸಲ ಹಾಜರಾತಿ ರಿಜಿಸ್ಟರ್​ ಬಳಸುವ ಅವಶ್ಯಕತೆ ಇಲ್ಲ.ಈ ಅಪ್ಲಿಕೇಶನ್​ ಸಂಸತ್ತಿನ ಆವರಣದಲ್ಲಿ ಮಾತ್ರ ಕಾರ್ಯನಿರ್ವಹಿಸಲಿದೆ. ತಮ್ಮ ಮುಖದ ಚಿತ್ರ ತೆಗೆದು ಅಪ್​ಲೋಡ್​ ಮಾಡಬೇಕಾಗುತ್ತದೆ.

ಈ ಅಪ್ಲಿಕೇಶನ್​​ನಲ್ಲಿ ಹಾಜರಾತಿ, ರಜೆ ಅರ್ಜಿ ಸೇರಿದಂತೆ ಇ-ವರದಿ, ಅರ್ಧ ದಿನ ಹಾಗೂ ಪೂರ್ಣ ದಿನದ ಹಾಜರಾತಿ ಸಹ ಇರಲಿದೆ. ಸೆಪ್ಟೆಂಬರ್​​​ 14ರಿಂದ ಈ ಸಲದ ಅಧಿವೇಶನ ಆರಂಭಗೊಳ್ಳಲಿದ್ದು, ಯಾವುದೇ ರೀತಿಯ ರಜೆ ಇಲ್ಲದೇ ಅಕ್ಟೋಬರ್​​ 1ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ABOUT THE AUTHOR

...view details