ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಮಕ್ಕಳ ಶಿಕ್ಷಣದ ಮೇಲೆ ಕೊರೊನಾ ಎಫೆಕ್ಟ್​​: ಯುನಿಸೆಫ್ ವರದಿ ಏನ್​ ಹೇಳುತ್ತೆ? - India has impacted education of over 247 million

ಕೋವಿಡ್​-19ನಿಂದ ದಕ್ಷಿಣ ಏಷ್ಯಾದ ಕನಿಷ್ಠ 600 ದಶಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅಲ್ಲದೇ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣಕ್ಕೆ ದಾಖಲಾದ 247 ದಶಲಕ್ಷ ಮಕ್ಕಳ ಮೇಲೆ ಇದರ ಪರಿಣಾಮವಾಗಿದೆ ಎಂದು ಯುನಿಸೆಫ್​​ ಸಿದ್ದಪಡಿಸಿದ ವರದಿಯಿಂದ ತಿಳಿದುಬಂದಿದೆ.

ಯುನಿಸೆಫ್ ವರದಿ
ಯುನಿಸೆಫ್ ವರದಿ

By

Published : Jun 25, 2020, 4:46 PM IST

ನವದೆಹಲಿ: ಸಾಂಕ್ರಾಮಿಕ ರೋಗ ಕೋವಿಡ್​-19 ಮತ್ತು ಲಾಕ್​ಡೌನ್​​ನಿಂದ ಭಾರತದಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣಕ್ಕೆ ದಾಖಲಾದ 247 ದಶಲಕ್ಷ ಮಕ್ಕಳ ಮೇಲೆ ಇದರ ಪರಿಣಾಮವಾಗಿದ್ದು, ಅಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ 28 ದಶಲಕ್ಷ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ ಎಂದು ಯುನಿಸೆಫ್​​ ಸಿದ್ದಪಡಿಸಿದ ವರದಿಯಿಂದ ತಿಳಿದುಬಂದಿದೆ.

ವರದಿಯ ಪ್ರಕಾರ, ಕೋವಿಡ್​-19ನಿಂದ ದಕ್ಷಿಣ ಏಷ್ಯಾದ ಕನಿಷ್ಠ 600 ದಶಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಆದರೆ ವೆಬ್ ಪೋರ್ಟಲ್‌, ಮೊಬೈಲ್ ಅಪ್ಲಿಕೇಶನ್ಸ್​​, ಟಿವಿ ಚಾನೆಲ್‌, ರೇಡಿಯೋ ಇಂತಹ ಅನೇಕ ಇ-ಪ್ಲಾಟ್‌ಫಾರ್ಮ್‌ಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಪ್ರಯತ್ನಗಳನ್ನು ವರದಿಯು ಎತ್ತಿ ತೋರಿಸಿದೆ.

ಕೋವಿಡ್​-19 ಲಾಕ್‌ಡೌನ್ ಹಿನ್ನೆಲೆ ಇತ್ತೀಚೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್ಟಿ) 1 ರಿಂದ 12 ನೇ ತರಗತಿ ಮಕ್ಕಳು ಮನೆಯಲ್ಲೇ ಕೂತು ಶಿಕ್ಷಣ ಪಡೆಯಲು ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್​​ನನ್ನು ಸಿದ್ಧಪಡಿಸಿದೆ.

ಯುನಿಸೆಫ್ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಕಾಲು ಭಾಗದಷ್ಟು ಕುಟುಂಬಗಳು (ಶೇ.24) ಮಾತ್ರ ಇಂಟರ್​ನೆಟ್​ ಸೌಲಭ್ಯವನ್ನು ಹೊಂದಿವೆ. ಇದರಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಕಲಿಕೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ನೋಡುವುದಾದ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸೇವೆಯಾದ 'ಚಿಲ್ಡ್‌ಲೈನ್'ಗೆ ಮಾರ್ಚ್. 20 ರಿಂದ ಏಪ್ರಿಲ್ 10 ರವರೆಗೆ 21 ದಿನಗಳಲ್ಲಿ 460,000 ಕರೆಗಳು ಬಂದಿವೆ.ಇದರಲ್ಲಿ ಹೆಚ್ಚಿನವೂ ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದವು. ಈ ಕರೆಗಳು ಅವರ ನಿಯಮಿತ ಕರೆಗಳಿಗಿಂತ ಶೇ.50 ರಷ್ಟು ಹೆಚ್ಚಾಗಿದೆ.

ಕೋವಿಡ್​-19 ಬಿಕ್ಕಟ್ಟಿನಿಂದ ಮಕ್ಕಳಿಗೆ ಸಿಗುತ್ತಿದ್ದ ಪೌಷ್ಟಿಕ ಆಹಾರದ ಕೊರತೆಯೂ ಉಲ್ಬಣಗೊಂಡಿದೆ. ಭಾರತದಲ್ಲಿ, ಐದು ವರ್ಷದೊಳಗಿನ ಸುಮಾರು 20 ಮಿಲಿಯನ್ ಮಕ್ಕಳು ತೂಕದ ಕೊರತೆಯಿಂದ ಬಳಲುತ್ತಿದ್ದು, 40 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು 15-49 ವರ್ಷ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಯುನಿಸೆಫ್ ವರದಿ ತಿಳಿಸಿದೆ.

ABOUT THE AUTHOR

...view details