ಅಹಮದಾಬಾದ್ (ಗುಜರಾತ್): ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್‌ಡೌನ್ ಮಾಡಲಾಗಿದೆ. ಈ ವೇಳೆಯಲ್ಲಿ ಮಕ್ಕಳು ಮನೆಯಲ್ಲಿರಲು ತುಂಬಾ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಪೆಟ್ಲಾಡ್ ಪಟ್ಟಣ ಮೂಲದ ವಾಮಾ ಟ್ರಸ್ಟ್ ಒಂದು ಉಪಾಯ ಮಾಡಿದ್ದು, ಇದರಿಂದ ಮಕ್ಕಳು ಸಂತೋಷದಿಂದ ಕಾಲ ಕಳೆಯಬಹುದಾಗಿದೆ.
50,000 ಕ್ಕೂ ಹೆಚ್ಚು ಮಕ್ಕಳನ್ನು ಸಂತೋಷ ಪಡಿಸಿದ ವಾಮಾ ಟ್ರಸ್ಟ್ - ವಿಜ್ಯಾಟ್ರಿಬೆನ್
ದೀರ್ಘಕಾಲದವರೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ವಿಜ್ಯಾಟ್ರಿಬೆನ್, ಮಕ್ಕಳಿಗೆ ತಿನ್ನಲು ಇಷ್ಟಪಡುವ ಚಾಕೋಲೆಟ್‌ಗಳು, ವೇಫರ್, ಬಿಸ್ಕತ್ ಮತ್ತು ಇತರ ತಿಂಡಿಗಳನ್ನು ಒಳಗೊಂಡಿರುವ ಕಿಟ್ ತಯಾರಿಸಿದ್ದಾರೆ.

ವಿಜ್ಯಾಟ್ರಿಬೆನ್ ಮತ್ತು ಅವರ ತಂಡವು ಮಕ್ಕಳಿಗಾಗಿ 50,000 ಕಿಟ್‌ಗಳನ್ನು ಸಿದ್ಧಪಡಿಸಿ, ಪೆಟ್ಲಾಡ್ ತಾಲೂಕಿನ ಹಳ್ಳಿಗಳಲ್ಲಿ ವಿತರಿಸಿದೆ. ಜೊತೆಗೆ ಮನೆಯಲ್ಲೇ ಇದ್ದು, ಸುರಕ್ಷಿತವಾಗಿರುವಂತೆ ಸೂಚಿಸಿದೆ. ಮಕ್ಕಳಿಗೆ ಕಿಟ್‌ಗಳ ವಿತರಣೆಯನ್ನು ವಾಮಾ ಟ್ರಸ್ಟ್‌ನ ಆಶ್ರಯದಲ್ಲಿ ಮಾಡಲಾಗುತ್ತಿದ್ದು, ವಿಗ್ಯಾಟ್ರಿಬೆನ್ ಇದರ ಸ್ಥಾಪಕರಾಗಿದ್ದಾರೆ.
ಪೆಟ್ಲಾಡ್ ತಾಲೂಕಿನಲ್ಲಿ ಈವರೆಗೆ 50,000 ಕಿಟ್‌ಗಳನ್ನು ಮಕ್ಕಳಿಗೆ ವಿತರಿಸಲಾಗಿದೆ ಎಂದು ಈಟಿವಿ ಭಾರತ್ ಜೊತೆ ಮಾತನಾಡಿದ ವಿಜ್ಯಾಟ್ರಿಬೆನ್ ಹೇಳಿದ್ದಾರೆ. ಈ ಕಿಟ್‌ನಲ್ಲಿ, ಅಹಮದಾಬಾದ್ ಮೂಲದ ಉತ್ಕರ್ಶ್ ಹೆಲ್ತ್ ಕೇರ್ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಕುಸುಂಬೆನ್ ವ್ಯಾಸ್ ಅವರು ಮಕ್ಕಳು ಹೆಚ್ಚು ಇಷ್ಟಪಡುವ ಫೈವ್ ಸ್ಟಾರ್ ಕ್ಯಾಡ್‌ಬರಿ ಚಾಕೋಲೆಟ್ ಬಾರ್‌ಗೆ ಕೊಡುಗೆ ನೀಡಿದ್ದಾರೆ.