ಕರ್ನಾಟಕ

karnataka

ETV Bharat / bharat

ಕೊರೊನಾ ಗೆಲ್ಲಲು ಇರುವುದೊಂದೇ ಮಾರ್ಗ:  ಅದೇ ಅತಿ ಹೆಚ್ಚಿನ ಟೆಸ್ಟ್​ಗಳು! - ಲ್ಯಾನ್ಸೆಟ್ ಅಧ್ಯಯನ

ಭಾರತವು 3.5 ಲಕ್ಷ ಕೋವಿಡ್​ -19 ಪ್ರಕರಣಗಳನ್ನು ದಾಖಲಿಸಿದ್ದರಿಂದ 8 ರಾಜ್ಯಗಳಲ್ಲಿ ಟೋಲ್ ಅಪಾಯಕಾರಿ ದರದಲ್ಲಿ ಏರಿಕೆಯಾಗಿದೆ. ಈಗಾಗಲೇ ಹಣದ ಕೊರತೆ ಇರುವ ರಾಜ್ಯ ಸರ್ಕಾರಗಳು ಪರೀಕ್ಷೆಯನ್ನು ಕೈಬಿಟ್ಟಿವೆ.

covid-19
ಕೊರೊನಾ

By

Published : Jun 20, 2020, 9:09 AM IST

ಹೈದರಾಬಾದ್ (ತೆಲಂಗಾಣ): ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲಲು ಹೆಚ್ಚಿನ ಕೊರೊನಾ ಟೆಸ್ಟ್​ ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿಪಾದಿಸಿ ಮೂರು ತಿಂಗಳಾಗಿದೆ. ಪರೀಕ್ಷಾ ಕಿಟ್‌ಗಳನ್ನು ಸಂಗ್ರಹಿಸಲು ಮತ್ತು ಅಭಿವೃದ್ಧಿಪಡಿಸಲು ಭಾರತ ಗಮನಹರಿಸಿದ್ದರೂ ಪ್ರಸ್ತುತ ಪರೀಕ್ಷಾ ಪ್ರಮಾಣವು ದಿನಕ್ಕೆ 1,50,000 ರಷ್ಟಿದೆ.

ವಿಶ್ವಾದ್ಯಂತ ಶೇ.52.47ರಷ್ಟು ಚೇತರಿಕೆಯ ಪ್ರಮಾಣ ಇದ್ದರೂ ಕೂಡಾ, 170 ಕೋಟಿ ಜನರು (ವಿಶ್ವ ಜನಸಂಖ್ಯೆಯ ಶೇ.20ರಷ್ಟು) ಕೊರೊನಾದಿಂದ ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ಲ್ಯಾನ್ಸೆಟ್ ಅಧ್ಯಯನವು ಬಹಿರಂಗಪಡಿಸಿದೆ.

ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರವಿಯಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ವ್ಯಾಪಕವಾದ ಪರೀಕ್ಷೆಯು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸಿಎಸ್‌ಐಆರ್ ಸೆಲ್ಯುಲರ್ ಮತ್ತು ಆಣ್ವಿಕ ಜೀವಶಾಸ್ತ್ರದ (ಸಿಸಿಎಂಬಿ) ನಿರ್ದೇಶಕ ರಾಕೇಶ್ ಮಿಶ್ರಾ ಹೇಳಿದ್ದಾರೆ. ಭಾರತವು ತನ್ನ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 10,00,000 ಮಾದರಿಗಳಿಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಸ್ತುತ, ಆರ್​ಟಿ - ಪಿಸಿಆರ್ ಪರೀಕ್ಷಾ ಕಿಟ್‌ಗಳ ಕೊರತೆ ಇದೆ. ಅದಲ್ಲದೇ ನೈಜ - ಸಮಯದ ಆರ್‌ಟಿ-ಪಿಸಿಆರ್ ಪ್ರೈಮರ್ ಮತ್ತು ಪ್ರೋಬ್‌ಗಳನ್ನು ಆಮದು ಮಾಡಿಕೊಳ್ಳುವುದು ದುಬಾರಿ ವ್ಯವಹಾರ ಎಂದು ಸಾಬೀತಾಗಿದೆ. ಅದಕ್ಕೆ ಪರಿಹಾರವಾಗಿ ಸಿಸಿಎಂಬಿ ಅಗ್ಗದ ನೆಸ್ಟೆಡ್ ಪಿಸಿಆರ್ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ, ಇದು ಐಸಿಎಂಆರ್ ಅನುಮೋದನೆಗಾಗಿ ಕಾಯುತ್ತಿದೆ.

ಇದರ ನಡುವೆ ನಿಮ್ಸ್, ಇಎಸ್ಐ ಮತ್ತು ಟಿಐಎಫ್ಆರ್ ವಿಜ್ಞಾನಿಗಳು ಆರ್​ಟಿ ಲ್ಯಾಂಪ್(RT-LAMP) ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕೋವಿಡ್-19 ಅನ್ನು ಅರ್ಧ ಗಂಟೆಯೊಳಗೆ ಪತ್ತೆ ಮಾಡುತ್ತದೆ. ದಕ್ಷಿಣ ಕೊರಿಯಾದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ಹೊಸ ಪ್ರತಿಜನಕ (new-antigen) / ಪ್ರತಿಕಾಯ(antibody) ಪರೀಕ್ಷೆಯನ್ನು ಐಸಿಎಂಆರ್ ಅನುಮೋದಿಸಿದೆ. ಕೊರೊನಾದ ಮೇಲಿನ ಯುದ್ಧವನ್ನು ಗೆಲ್ಲಲು ದೊಡ್ಡ ಪ್ರಮಾಣದ ಪರೀಕ್ಷಾ ಹಾದಿಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

ಮತ್ತೊಂದೆಡೆ ಭಾರತವು 3.5 ಲಕ್ಷ ಕೋವಿಡ್​ -19 ಪ್ರಕರಣಗಳನ್ನು ದಾಖಲಿಸಿದ್ದರಿಂದ 8 ರಾಜ್ಯಗಳಲ್ಲಿ ಟೋಲ್ ಅಪಾಯಕಾರಿ ದರದಲ್ಲಿ ಏರಿಕೆಯಾಗಿದೆ. ಈಗಾಗಲೇ ಹಣದ ಕೊರತೆ ಇರುವ ರಾಜ್ಯ ಸರ್ಕಾರಗಳು ಪರೀಕ್ಷೆಯನ್ನು ಕೈಬಿಟ್ಟಿವೆ. ಪರಿಣಾಮವಾಗಿ ಇದು ಸಮುದಾಯ ಪ್ರಸರಣ ಹಂತವನ್ನು ತಲುಪಿದೆ. ಸ್ಥಳೀಯವಾಗಿ ಚಿಕಿತ್ಸೆ ನೀಡುವ ಮೂಲಕ ಜರ್ಮನಿ ತನ್ನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚು ಹೊರೆಯಾಗಿರುವುದನ್ನು ತಡೆಗಟ್ಟಿದೆ. ಭಾರತವು ಇದೇ ರೀತಿಯ ವಿಧಾನವನ್ನು ಅನುಸರಿದರೆ ಉತ್ತಮ.

ಕೋವಿಡ್​-19 ಚಿಕಿತ್ಸಾ ವೆಚ್ಚಗಳು ಅನೇಕರಿಗೆ ಅಸಹನೀಯ ಹೊರೆಯಾಗಿರುವುದರಿಂದ, ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಮೂಲಕ ಬಡವರ ಆರೋಗ್ಯ ವಿಮಾ ವೆಚ್ಚವನ್ನು ಭರಿಸುವ ಅವಶ್ಯಕತೆಯಿದೆ. ಇನ್ನು ಭಾರತಕ್ಕೆ ಮಾನ್ಸೂನ್ ಕಾಲಿಟ್ಟಿರುವುದರಿಂದ ಕೊರೊನಾದೊಂದಿಗೆ ಹಲವಾರು ಸೊಳ್ಳೆಯಿಂದ ಹರಡುವ ರೋಗಗಳೂ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವನ್ನು ಉಂಟುಮಾಡುತ್ತವೆ ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸನ್ನಿಹಿತ ದುರಂತವನ್ನು ನಿಭಾಯಿಸಲು, ಕೊರೊನಾ ಟೆಸ್ಟಿಂಗ್​ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರನ್ನು ಪರೀಕ್ಷೆ ಮತ್ತು ಪ್ರತ್ಯೇಕತೆಯ ಮೂಲಕ ರಕ್ಷಿಸಬೇಕು. ಸಾಂಕ್ರಾಮಿಕ ರೋಗವನ್ನು ನಿರ್ಬಂಧಿಸದ ಹೊರತು ಭಾರತವು ಈ ಯುದ್ಧವನ್ನು ಗೆಲ್ಲಲು ಯಾವುದೇ ಮಾರ್ಗವಿಲ್ಲ.

ABOUT THE AUTHOR

...view details