ಹೈದರಾಬಾದ್: ಕೊರೊನಾ ವೈರಸ್ ಬಂದ ಮೇಲೆ ಆರೋಗ್ಯ ವಿಮೆಯ ಕುರಿತಾದ ಭಾರತೀಯ ದೃಷ್ಟಿಕೋನಗಳು ಬದಲಾಗುತ್ತಿವೆ. ಹಠಾತ್ತಾಗಿ ಕಾಯಿಲೆ ಬಿದ್ದಾಗ ಅದೇ ಸಮಯಕ್ಕೆ ಆರೋಗ್ಯ ವಿಮೆ ಕೊಳ್ಳುವುದು ಸಾಧ್ಯವಿಲ್ಲ. ಇನ್ನು ವಿಮೆ ಇಲ್ಲದಿದ್ದರೆ ದೊಡ್ಡ ಮೊತ್ತದ ಆಸ್ಪತ್ರೆಯ ಬಿಲ್ ಪಾವತಿಸುವುದು ಅನಿವಾರ್ಯ ಎಂಬುದು ಇತ್ತೀಚೆಗೆ ಭಾರತೀಯರಿಗೆ ಅರಿವಾಗುತ್ತಿದೆ.
ಕೋವಿಡ್-19 ನ ಆರಂಭಿಕ ಚಿಕಿತ್ಸೆಗಾಗಿ ಪ್ರತಿಷ್ಠಿತ ಆಸ್ಪತ್ರೆಗಳು ದುಬಾರಿ ಶುಲ್ಕಗಳನ್ನು ವಸೂಲಿ ಮಾಡುತ್ತಿವೆ. ಇನ್ನು ಕೆಲ ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರವು ಈ ಶುಲ್ಕ ಭರಿಸುತ್ತಿವೆ. ಇನ್ನು ಸರ್ಕಾರಿ ಆಸ್ಪತ್ರೆಗಳು ಕೂಡ ಈ ಸಮಯದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಆದರೆ ಇದಕ್ಕೂ ಹೆಚ್ಚಿನ ಸುರಕ್ಷತೆ ಆರೈಕೆ ಬೇಕೆಂದರೆ ಅದಕ್ಕಾಗಿ ಹೆಚ್ಚುವರಿ ಹಣ ಖರ್ಚು ಮಾಡಬೇಕಾಗುತ್ತದೆ.
ಇತ್ತೀಚೆಗೆ ಕೆಲ ಕೊರೊನಾ ವೈರಸ್ ರೋಗಿಗಳು ತಮ್ಮ ಚಿಕಿತ್ಸೆಗೆ 8-10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನೂ ಕೇಳಿದ್ದೇವೆ. ಐಸಿಯು, ವೆಂಟಿಲೇಟರ್, ವೈದ್ಯರ ಫೀಸು, ನರ್ಸಿಂಗ್ ಫೀಸು, ಔಷಧಿ, ಇಂಜೆಕ್ಷನ್ ಮತ್ತು ಪಿಪಿಇ ಕಿಟ್ಗಳು ದುಬಾರಿ ಶುಲ್ಕಗಳು ನಿಮ್ಮ ಜೇಬಿಗೆ ಭಾರವಾಗುವುದು ಖಂಡಿತ. ಹೀಗಾಗಿ ಆರೋಗ್ಯ ವಿಮಾ ಪಾಲಿಸಿ ಪಡೆದುಕೊಳ್ಳುವುದು ಜಾಣತನದ ಕ್ರಮವಾಗಿದೆ.
ನಿಮಗೆ ಯಾವ ರೀತಿಯ ವಿಮಾ ಪಾಲಿಸಿ ಸರಿಹೊಂದಬಲ್ಲದು ಎಂಬುದರ ಕುರಿತಾಗಿ ವಿವರಿಸಲಾಗಿದ್ದು, ನೀವೂ ತಿಳಿದುಕೊಳ್ಳಿ:
ವಿಭಿನ್ನ ಅಗತ್ಯಗಳಿಗೆ ವಿಭಿನ್ನ ಪಾಲಿಸಿ
ಸಾಂಪ್ರದಾಯಿಕ ಆರೋಗ್ಯ ವಿಮಾಪಾಲಿಸಿಗಳು ಕೊರೊನಾ ವೈರಸ್ ಸೇರಿದಂತೆ ಇನ್ನೂ ಹಲವಾರು ಕಾಯಿಲೆಗಳ ಸಂದರ್ಭದಲ್ಲಿ ಆಸ್ಪತ್ರೆ ಶುಲ್ಕ ಹಾಗೂ ಚಿಕಿತ್ಸಾ ಶುಲ್ಕಗಳಿಗೆ ಕವರೇಜ್ ನೀಡುತ್ತವೆ. ಈ ಮಾದರಿಯ ವಿಮೆಯಲ್ಲಿ ಆಸ್ಪತ್ರೆಯ ಸಂಪೂರ್ಣ ಶುಲ್ಕಗಳನ್ನು ವಿಮಾ ಕಂಪನಿ ನೇರವಾಗಿ ಆಸ್ಪತ್ರೆಗೆ ಪಾವತಿಸುತ್ತದೆ. ಇದಕ್ಕೆ ಕ್ಯಾಶ್ಲೆಸ್ ಮೋಡ್ ಎಂದೂ ಕರೆಯುತ್ತಾರೆ. ನಿಮ್ಮ ವಿಮಾ ಪಾಲಿಸಿಯ ಸಮ್ ಅಶ್ಯೂರ್ಡ್ ಮೊತ್ತವು ಸಾಕಷ್ಟು ದೊಡ್ಡದಿದ್ದಲ್ಲಿ ಎಲ್ಲ ಪಾವತಿಗಳು ಅಟೊಮ್ಯಾಟಿಕ್ ರೀತಿಯಲ್ಲಿ ಪಾವತಿಸಲ್ಪಡುತ್ತವೆ.
ಇನ್ನು ಕೇವಲ ಕೋವಿಡ್ ಚಿಕಿತ್ಸೆಗಾಗಿಯೇ ಕೆಲ ನಿರ್ದಿಷ್ಟ ವಿಮಾ ಪಾಲಿಸಿ ಕೂಡ ಬಂದಿವೆ. ಒಂದು ಬಾರಿ ಪಾವತಿಸಿ ಖರೀದಿಸಲಾಗುವ ಇಂಥ ಪಾಲಿಸಿ ಕ್ಲೇಮ್ ಮಾಡುವಾಗ ಆಸ್ಪತ್ರೆಯ ಬಿಲ್ ಇತ್ಯಾದಿ ಬೇಕಾಗುವುದಿಲ್ಲ. ಆದರೆ ಇಂಥ ಮೆಡಿಕ್ಲೇಮ್ ಮಾದರಿಯ ಪಾಲಿಸಿಗಳು ಚಿಕಿತ್ಸೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಬಳಸಲಾಗುವ ಇತರ ವಸ್ತು ಅಥವಾ ಕನ್ಸ್ಯೂಮೇಬಲ್ಸ್ಗಳಿಗೆ ಅನ್ವಯಿಸುವುದಿಲ್ಲ. ಇವುಗಳಿಗೆಲ್ಲ ನೀವೇ ಪಾವತಿ ಮಾಡಬೇಕಾಗುತ್ತದೆ.