ನವದೆಹಲಿ:ಕಳೆದ 24 ಗಂಟೆಗಳಲ್ಲಿ 45,882 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 90,04,366ಕ್ಕೆ ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಕೊರೊನಾ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡಿದೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 45,882 ಸೋಂಕಿತರು ಪತ್ತೆ - ಕೊರೊನಾ ಸೋಂಕು ಏರಿಕೆ
ನಿನ್ನೆ ದೇಶದಲ್ಲಿ 45,576 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಂದು 45,882 ಸೋಂಕಿತರು ಪತ್ತೆಯಾಗಿದ್ದಾರೆ. ಇದಲ್ಲದೇ ನಿನ್ನೆ 585 ಮಂದಿ ಕೊರೊನಾಗೆ ಬಲಿಯಾದರೆ ಕಳೆದ 24 ಗಂಟೆಯಲ್ಲಿ 584 ಮಂದಿ ಸಾವನ್ನಪ್ಪಿದ್ದಾರೆ.
![ದೇಶದಲ್ಲಿ ಕಳೆದ 24 ಗಂಟೆಯಲ್ಲಿ 45,882 ಸೋಂಕಿತರು ಪತ್ತೆ corona news](https://etvbharatimages.akamaized.net/etvbharat/prod-images/768-512-9600331-thumbnail-3x2-covd.jpg)
ಕೊರೊನಾ ಸುದ್ದಿ
ನಿನ್ನೆ ದೇಶದಲ್ಲಿ 45,576 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಂದು 45,882 ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೂ 584 ಮಂದಿ ಕೊರೊನಾಗೆ ಬಲಿಯಾಗಿದ್ದು, ಈವರೆಗೆ 1,32,162 ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 44,807 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟು 84,28,410 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 4,43,794 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.