ಕರ್ನಾಟಕ

karnataka

ETV Bharat / bharat

ಕಳೆದ 24 ಗಂಟೆಗಳಲ್ಲಿ 8,380 ಹೊಸ ಕೊರೊನಾ ಪಾಸಿಟಿವ್ ಪತ್ತೆ! - COVID-19

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ 8,380 ಹೊಸ ಕೊರೊನಾ ಪಾಸಿಟಿವ್ ಕೇಸ್​​ಗಳ ದೃಢಪಟ್ಟಿದ್ದು, 193 ಜನರು ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

COVID-19
ಕಳೆದ 24 ಗಂಟೆಗಳಲ್ಲಿ 8,380 ಹೊಸ ಕೊರೊನಾ ಪಾಸಿಟಿವ್ ಪತ್ತೆ

By

Published : May 31, 2020, 6:06 PM IST

ನವದೆಹಲಿ:ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಗರಿಷ್ಠ 8,380 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 1.82 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ಶನಿವಾರ ಬೆಳಗ್ಗೆಯಿಂದ ಕೊರೊನಾದಿಂದ 193 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,164 ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸಕ್ರಿಯ ಕೊರೊನಾ ಪ್ರಕರಣಗಳು 89,995 ಇದ್ದು, 86,983 ಜನರು ಗುಣಮುಖರಾಗಿದ್ದಾರೆ. ಇನ್ನು ಈವರೆಗೆ ಸುಮಾರು 47.76 ರಷ್ಟು ರೋಗಿಗಳು ಚೇತರಿಸಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ 4,614 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ABOUT THE AUTHOR

...view details