ಕರ್ನಾಟಕ

karnataka

ETV Bharat / bharat

ಕೊರೊನಾ ಬಗ್ಗೆ ತಪ್ಪು ಮಾಹಿತಿ ನೀಡುವವರ ವಿರುದ್ಧ ಸಮರ: $6.5 ಮಿಲಿಯನ್​ ವ್ಯಯಿಸಲು ಗೂಗಲ್​ ನಿರ್ಧಾರ

ಕೊರೊನಾ ಕುರಿತಂತೆ ತಪ್ಪು ಮಾಹಿತಿ ರವಾನೆಯಾಗುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಈ ರೀತಿಯಾಗಿ ನಿರ್ಧರಿಸಿದೆ. ತಪ್ಪು ಮಾಹಿತಿಯಿಂದ ಜನರು ಕಳವಳಕ್ಕೆ ಈಡಾಗುತ್ತಿದ್ದು ನೈಜ ಸುದ್ದಿಯನ್ನು ನೀಡಬೇಕೆಂದು ಮನವಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ 6.5 ಮಿಲಿಯನ್​ ಡಾಲರ್​ ವ್ಯಯಿಸಲು ನಿರ್ಧರಿಸಿದೆ.

Google
ಗೂಗಲ್​

By

Published : Apr 3, 2020, 6:19 PM IST

ನವದೆಹಲಿ: ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇರುವ ಫ್ಯಾಕ್ಟ್​ ಚೆಕ್ಕರ್ ಹಾಗೂ ತಪ್ಪು ಮಾಹಿತಿ ಹರಡುವವರ ವಿರುದ್ಧ ಹೋರಾಡುತ್ತಿರುವ ಆದಾಯರಹಿತ ಸಂಸ್ಥೆಗಳಿಗಾಗಿ ಒಟ್ಟು 6.5 ಮಿಲಿಯನ್​ ಡಾಲರ್​ ಅನ್ನು ವ್ಯಯಿಸಲು ನಿರ್ಧರಿಸಲಾಗಿದೆ ಎಂದು ಗೂಗಲ್​ ಹೇಳಿಕೊಂಡಿದೆ.

ಕೊರೊನಾ ಕುರಿತಂತೆ ತಪ್ಪು ಮಾಹಿತಿ ರವಾನೆಯಾಗುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಈ ರೀತಿಯಾಗಿ ನಿರ್ಧರಿಸಿದೆ. ತಪ್ಪು ಮಾಹಿತಿಯಿಂದ ಜನರು ಕಳವಳಕ್ಕೆ ಈಡಾಗುತ್ತಿದ್ದು ನೈಜ ಸುದ್ದಿಯನ್ನು ನೀಡಬೇಕೆಂದು ಮನವಿ ಮಾಡಿದೆ. ಇದರ ಜೊತೆಗೆ ನಿಖರವಾದ ಸುದ್ದಿಯನ್ನು ನೀಡುವ ಮೂಲಕ ವಿಜ್ಞಾನಿಗಳು, ಪತ್ರಕರ್ತರು, ಸಾರ್ವಜನಿಕ ರಂಗದಲ್ಲಿರುವವರು ಸಹಕರಿಸಬೇಕೆಂದು ಕೇಳಿಕೊಂಡಿದೆ.

ಇದಕ್ಕಾಗಿ ಕೆಲಸ ಮಾಡುವ ಫ್ಯಾಕ್ಟ್​ ಚೆಕರ್​ ಹಾಗೂ ಆದಾಯರಹಿತ ಸಂಸ್ಥೆಗಳಿಗೆ 6.5 ಮಿಲಿಯನ್​ ಡಾಲರ್​ ಒದಗಿಸುತ್ತೇವೆ. ಫ್ಯಾಕ್ಟ್​ ಚೆಕರ್​ಗಳು ಹಾಗೂ ಆರೋಗ್ಯ ಪ್ರಾಧಿಕಾರಗಳು ಜನರು ಹುಡುಕುತ್ತಿರುವ ವಿಚಾರಗಳ ಬಗ್ಗೆ ಸತ್ಯಾಂಶ ಇರುವ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು ಎಂದಿದೆ.

ಆದಾಯ ರಹಿತ ಸಂಸ್ಥೆಗಳು ಕೂಡಾ ಸುದ್ದಿಯನ್ನು ಪರಿಷ್ಕರಿಸಬೇಕು ಎಂದಿರುವ ಗೂಗಲ್​ ತನ್ನ ಗೂಗಲ್​ ನ್ಯೂಸ್​ ಇನ್ಶಿಯೇಟೀವ್ ಕಾರ್ಯಕ್ರಮದ ಅನ್ವಯ ಆನ್​ಲೈನ್​ ಸಂಪನ್ಮೂಲ ಕೇಂದ್ರಗಳಿಗೆ ನೈಜ ಸುದ್ದಿಯನ್ನು ಒದಗಿಸಲು ಮುಂದಾಗಿದೆ. ಜೊತೆಗೆ ಗೂಗಲ್​ ಟ್ರೆಂಡ್​ ಡಾಟಾ ವಿಶ್ವದ ಪತ್ರಕರ್ತರಿಗೆ, ಆರೋಗ್ಯ ಸಂಸ್ಥೆಗಳಿಗೆ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ನೀಡಲು ಮುಂದಾಗಿದೆ.

ABOUT THE AUTHOR

...view details