ಕರ್ನಾಟಕ

karnataka

ETV Bharat / bharat

ವಿಶ್ವದಲ್ಲಿ 80 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ, 14 ಲಕ್ಷ ಮಂದಿಗೆ ಕೊರೊನಾ ಬಾಧೆ - italy

ವಿಶ್ವದೆಲ್ಲೆಡೆ ಕೊರೊನಾ ತನ್ನ ಆಟಾಟೋಪ ಮುಂದುವರೆಸಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 80 ಸಾವಿರದ ಗಡಿ ದಾಟಿದೆ. ಅಮೆರಿಕ, ಸ್ಪೇನ್​ ಇಟಲಿ ರಾಷ್ಟ್ರಗಳು ತತ್ತರಿಸಿವೆ.

corona
ಕೊರೊನಾ

By

Published : Apr 8, 2020, 6:38 PM IST

Updated : Apr 8, 2020, 7:24 PM IST

ನವದೆಹಲಿ: ವಿಶ್ವದಲ್ಲಿ ಕೊರೊನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 80 ಸಾವಿರಕ್ಕೆ ತಲುಪಿದೆ. ಈವರೆಗೆ ಒಟ್ಟು 82,149 ಜನರು ಸಾವನ್ನಪ್ಪಿದ್ದು, 14,46,557 ಪ್ರಕರಣಗಳು ದಾಖಲಾಗಿವೆ. ಸುಮಾರು 3,07,982 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಟಲಿ, ಸ್ಪೇನ್, ಇಂಗ್ಲೆಂಡ್​ ಮತ್ತು ಫ್ರಾನ್ಸ್ ದೇಶಗಳಲ್ಲಿ ಕೊರೊನಾ ಉಪಟಳ ತೀವ್ರವಾಗಿದೆ. ಅಮೆರಿಕದಲ್ಲಿ 3,83,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಂತರದ ಸ್ಥಾನದಲ್ಲಿ ಸ್ಪೇನ್​ನಲ್ಲಿ 1,46,690, ಇಟಲಿಯಲ್ಲಿ 1,35,586 ಮತ್ತು ಫ್ರಾನ್ಸ್​ನಲ್ಲಿ 1,10, 070 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೊರೊನಾ ಸಂಬಂಧಿ ಸಾವುಗಳ ವಿಚಾರಕ್ಕೆ ಬರುವುದಾದರೆ ಇಟಲಿಯಲ್ಲಿ 17,127, ಸ್ಪೇನ್​​ನಲ್ಲಿ 13,897, ಫ್ರಾನ್ಸ್​​ನಲ್ಲಿ 10,343 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸ್ಪೇನ್​ನಲ್ಲಿ ಒಂದೇ ದಿನದಲ್ಲಿ 757 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯ ನಂತರ ಅತಿ ದೊಡ್ಡ ಕೊರೊನಾ ಪೀಡಿತ ರಾಷ್ಟ್ರ ಇದಾಗಿದ್ದು, 48,021 ಮಂದಿ ಈವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ವಿಶ್ವ ಆರೋಗ್ಯ ಸಂಘಟನೆ ಕೊರೊನಾವನ್ನು ಮಹಾಮಾರಿ ಎಂದು ಘೋಷಣೆ ಮಾಡಿದಾಗಿನಿಂದ ಬಹುತೇಕ ರಾಷ್ಟ್ರಗಳನ್ನು ತಮ್ಮ ತಮ್ಮ ರಾಷ್ಟ್ರಗಳ ಗಡಿಗಳನ್ನು ಬಂದ್ ಮಾಡಿವೆ. ವಿಮಾನಯಾವನ್ನೂ ಕೂಡಾ ರದ್ದು ಮಾಡಿ ಲಾಕ್​ಡೌನ್ ಘೋಷಣೆ ಮಾಡಿವೆ. ಆದರೂ ಕೂಡಾ ಕೊರೊನಾ ವೇಗವಾಗಿ ಹರಡುತ್ತಿರುವುದು ಆತಂಕಕ್ಕೀಡು ಮಾಡಿದೆ.

Last Updated : Apr 8, 2020, 7:24 PM IST

ABOUT THE AUTHOR

...view details