ಕರ್ನಾಟಕ

karnataka

ETV Bharat / bharat

ಕೊರೊನಾ: 3ನೇ ಹಂತದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಗ್ನೆನ್‌ಮಾರ್ಕ್‌ನ ಫಾವಿಫಿರವಿರ್ ಔಷಧ - ಗ್ಲೆನ್‌ಮಾರ್ಕ್‌ನ ಫಾವಿಪಿರವಿರ್ ಔಷಧಿ

ಸೌಮ್ಯ ಮತ್ತು ಮಧ್ಯಮ ಕೊರೊನಾ ಸೋಂಕಿತ ರೋಗಿಗಳು ಮೂರನೇ ಹಂತದ ವೈರಸ್‌ ನಿರೋಧಕ ಪರೀಕ್ಷೆಯಲ್ಲಿ ಚೇತರಿಕೆಯ ಲಕ್ಷಣಗಳನ್ನು ಕಂಡುಕೊಂಡಿದ್ದಾರೆ ಎಂದು ಫಾರ್ಮಾಸೆಟಿಕಲ್‌ ಕಂಪನಿ ಗ್ನೆನ್‌ಮಾರ್ಕ್‌ ಹೇಳುತ್ತಿದೆ.

favipiravir
favipiravir

By

Published : Jul 23, 2020, 3:16 PM IST

ನವದೆಹಲಿ: ಭಾರತದ ಏಳು ಕ್ಲಿನಿಕಲ್ ತಾಣಗಳಲ್ಲಿ ರೋಗಿಗಳ ಮೇಲೆ ನಡೆಸಿದ 3ನೇ ಹಂತದ ವೈರಸ್‌ನಿರೋಧಕ ಔಷಧಗಳ ಪ್ರಯೋಗದ ಸಕಾರಾತ್ಮಕ ಫಲಿತಾಂಶಗಳನ್ನು ದೇಶೀಯ ಫಾರ್ಮಾ ಕಂಪನಿ ಗ್ಲೆನ್‌ಮಾರ್ಕ್ ಪ್ರಕಟಿಸಿದೆ.

ಫಾವಿಪಿರವಿರ್ ಔಷಧಿಯಿಂದ ಚಿಕಿತ್ಸೆ ಪಡೆದ ಕೋವಿಡ್ ರೋಗಿಗಳು ಇತರ ಕ್ಲಿನಿಕಲ್ ಚಿಕಿತ್ಸೆಯ ಆರೈಕೆ ಪಡೆಯುತ್ತಿರುವ ರೋಗಿಗಳಿಗಿಂತ ಬೇಗ ಚೇರಿಸಿಕೊಂಡಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

"ಪ್ರಯೋಗದ 3ನೇ ಹಂತದಲ್ಲಿ, ಶೇ 28.6ರಷ್ಟು ವೇಗವಾಗಿ ವೈರಲ್ ಕ್ಲಿಯರೆನ್ಸ್ ದೊರಕಿದೆ" ಎಂದು ಕಂಪನಿ ಹೇಳುತ್ತಿದೆ. ದೇಶದ ವಿವಿಧೆಡೆಯಿಂದ 150 ಸೋಂಕಿತರನ್ನು ಈ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ರೋಗದ ತೀವ್ರತೆಯ ಆಧಾರದ ಮೇಲೆ ಸೌಮ್ಯ (90 ರೋಗಿಗಳು) ಮತ್ತು ಮಧ್ಯಮ (60 ರೋಗಿಗಳು) ವರ್ಗದ ರೋಗಿಗಳೆಂದು ವರ್ಗೀಕರಿಸಿ, ವಿವಿಧ ಡೋಸೇಜ್​ಗಳಲ್ಲಿ ಔಷಧಿ ನೀಡಲಾಗಿದೆ.

ABOUT THE AUTHOR

...view details