ನವದೆಹಲಿ:ರಕ್ಕಸ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯ ಪಿಎಂ ಕೇರ್ಸ್ ನಿಧಿಗೆ ಕೋಟ್ಯಂತರ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಬರುತ್ತಿದೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ಕೈ ಜೋಡಿಸಿದ್ದಾರೆ.
ಈಗಾಗಲೇ ಪಿಎಂ ಕೇರ್ಸ್ ನಿಧಿಗೆ ಸಂಸದರ ನಿಧಿಯಿಂದ 1 ಕೋಟಿ ರೂ ದೇಣಿಗೆ ನೀಡಿರುವ ಗಂಭೀರ್, ತಮ್ಮ ಎರಡು ವರ್ಷಗಳ ಸ್ಯಾಲರಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಲು ನಿರ್ಧರಿಸಿದ್ದಾರೆ. ಸಂಸದರಾಗಿರುವ ಗಂಭೀರ್, ಬೇರೆಯವರ ಬಳಿ ಕೂಡ ಮನವಿ ಮಾಡಿಕೊಂಡಿದ್ದು, ಕೋವಿಡ್-19 ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿ ಎಂದ ಕೋರಿದ್ದಾರೆ.