ಕರ್ನಾಟಕ

karnataka

ETV Bharat / bharat

ಎಲ್ಲಾ ರಾಜ್ಯಗಳಲ್ಲಿ 24X7 ಸಹಾಯವಾಣಿ ತೆರೆಯಲು ಕೇಂದ್ರ ಗೃಹ ಸಚಿವಾಲಯ ಸಲಹೆ - 24x7 ಸಹಾಯವಾಣಿ ಸಂಖ್ಯೆ ಸುದ್ದಿ

21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ನಂತರ, ಕೇಂದ್ರ ಗೃಹ ಸಚಿವಾಲಯ ಬುಧವಾರ 24x7 ಸಹಾಯವಾಣಿ ಸಂಖ್ಯೆ ತೆರೆದೆ ರೋಗಿಗಳಿಗೆ ಮಾಹಿತಿ ಜೊತೆ್ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ.

MHA
ಎಮ್​ಹೆಚ್ಎ

By

Published : Mar 26, 2020, 11:16 AM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ನಂತರ, ಕೇಂದ್ರ ಗೃಹ ಸಚಿವಾಲಯ ಬುಧವಾರ 24x7 ಸಹಾಯವಾಣಿ ಸಂಖ್ಯೆ ತೆರೆದೆ ರೋಗಿಗಳಿಗೆ ಮಾಹಿತಿ ಜೊತೆ್ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ.

ಎಲ್ಲಾ ರಾಜ್ಯ ಅಥವಾ 24x7 ನಿಯಂತ್ರಣ ಕಚೇರಿ ಸಹಾಯವಾಣಿಗಳೊಂದಿಗೆ ಜಿಲ್ಲಾ ಮಟ್ಟದಿಂದ ನೇರ ಸಂದರ್ಶನ ಮಾಡಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮತ್ತು ಕುಂದುಕೊರತೆಗಳನ್ನು ಸರಿಪಡಿಸಲು ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು, ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮುಖ್ಯಸ್ಥರಿಗೆ ಎಂಎಚ್‌ಎ ಅಗತ್ಯ ಸಲಹೆಯನ್ನು ನೀಡಲಿದೆ.

ಮೇಲಿನ ಅಗತ್ಯ ಸೇವೆಗಳು, ಅಂತರ ರಾಜ್ಯ ಗಡಿಗಳಲ್ಲಿ ನೋಡಲ್ ಅಧಿಕಾರಿಗಳ ನೇಮಕ, ವಾಹನ ಪಾಸ್ / ಇ-ಪಾಸ್ ಇತ್ಯಾದಿ ಸೇರಿದಂತೆ ಸರಕುಗಳ ಅಡೆತಡೆಯಿಲ್ಲದ ಕಾರ್ಯಾಚರಣೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೊಕಾಲ್ ಹಾಕುವ ಅವಶ್ಯಕತೆಯಿದೆ ಎಂದು ಎಂಎಚ್‌ಎ ಹೇಳಿದೆ.

ಜಿಎನ್‌ಸಿಟಿಡಿಯ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಮತ್ತು ಜಿಎನ್‌ಸಿಟಿಡಿಯ ಜಿಲ್ಲಾಧಿಕಾರಿಗಳ ಎಲ್ಲಾ ಕಚೇರಿಗಳಲ್ಲಿ 24x7 ನಿಯಂತ್ರಣ ಕೊಠಡಿ ಸ್ಥಾಪಿಸಲಾಗುತ್ತಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ನಿಗದಿತ ಸಮಯದ ಆಧಾರದಲ್ಲಿ ಮೇಲೆ ಡಿಎಂ ಕಚೇರಿಗಳೊಂದಿಗೆ ಸರಿಯಾದ ಸಲಹೆಯನ್ನು ನೀಡಲು ಎಸಿಪಿ ಶ್ರೇಣಿಯ ಅಧಿಕಾರಿ ಎಲ್ಲಾ ಸಮಯದಲ್ಲೂ ಲಭ್ಯವಿರುತ್ತಾರೆ.

ABOUT THE AUTHOR

...view details