ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದಾಗಿ ವಿಶ್ವವಿದ್ಯಾಲಯಗಳ ಮುಂಬರುವ ಎಲ್ಲಾ ಸೆಮಿಸ್ಟರ್ ಮತ್ತು ಅಂತಿಮ ಪರೀಕ್ಷೆಗಳನ್ನು ರದ್ದುಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಕೋವಿಡ್ 19: ವಿವಿ ಪರೀಕ್ಷೆಗಳನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ - ಮನೀಶ್ ಸಿಸೋಡಿಯಾ
ವಿಶ್ವವಿದ್ಯಾಲಯಗಳ ಮುಂಬರುವ ಎಲ್ಲಾ ಸೆಮಿಸ್ಟರ್ ಮತ್ತು ಅಂತಿಮ ಪರೀಕ್ಷೆಗಳನ್ನು ದೆಹಲಿ ಸರ್ಕಾರ ರದ್ದುಗೊಳಿಸಿದೆ.
ಮನೀಶ್ ಸಿಸೋಡಿಯಾ
ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಆಂತರಿಕ ಮೌಲ್ಯಮಾಪನದ ಅಂಕಗಳ ಆಧಾರದ ಮೇಲೆ ಪದವಿಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಸಿಸೋಡಿಯಾ ಮಾಹಿತಿ ನೀಡಿದರು.
ಕೊರೊನಾವು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಕೆಲವು ಅಭೂತಪೂರ್ವ ಸಮಯಗಳಿಗೆ ಅಭೂತಪೂರ್ವ ನಿರ್ಧಾರಗಳು ಬೇಕಾಗುತ್ತವೆ ಎಂದು ಸಿಸೋಡಿಯಾ ಹೇಳಿದರು.