ಕರ್ನಾಟಕ

karnataka

ETV Bharat / bharat

ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಒಡಿಶಾದ ಕಟಕ್ ನಗರದಲ್ಲಿ ಲಾಕ್‌ಡೌನ್​ ವಿಸ್ತರಣೆ - ಒಡಿಶಾದ ಕಟಕ್​ನಲ್ಲಿ ಲಾಕ್ ಡೌನ್

ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದ ಲಾಕ್‌ ಡೌನ್​ ಜುಲೈ 8 ಸೋಮವಾರ ಮಧ್ಯರಾತ್ರಿವರೆಗೂ ಜಾರಿಯಲ್ಲಿರುತ್ತದೆ ಎಂದು ಕಟಕ್ ಮುನ್ಸಿಪಲ್ ಕಾರ್ಪೊರೇಷನ್ ಘೋಷಿಸಿದೆ.

Cuttack Municipal Corporation orders shutdown till July 8
ಒಡಿಶಾದ ಕಟಕ್ ನಗರದ ಬಂದ್​

By

Published : Jul 5, 2020, 2:36 PM IST

ಕಟಕ್ (ಒಡಿಶಾ) :ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಜುಲೈ 8 ರ ಮಧ್ಯರಾತ್ರಿವರೆಗೆ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ ಎಂದು ಕಟಕ್ ಮುನ್ಸಿಪಲ್ ಕಾರ್ಪೊರೇಷನ್ (ಸಿಎಂಸಿ) ತಿಳಿಸಿದೆ.

ಇದರ ಜೊತೆಗೆ, ಒಡಿಶಾ ಹೈಕೋರ್ಟ್​ ಮತ್ತು ಅದರ ಕಚೇರಿಗಳನ್ನು ಜುಲೈ 8 ವರೆಗೆ ಮುಚ್ಚಲು ತೀರ್ಮಾನಿಸಲಾಗಿದ್ದು, ಜುಲೈ 6 ಕ್ಕೆ ಅಧಿಸೂಚಿಸಲಾದ ಪೀಠಗಳು ಜುಲೈ 9 ರಂದು ಕಾರ್ಯನಿರ್ವಹಿಸುತ್ತವೆ. ಜುಲೈ 6 ರಂದು ಪಟ್ಟಿ ಮಾಡಲಾದ ಪ್ರಕರಣಗಳನ್ನು ಜುಲೈ 9 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಒಡಿಶಾದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ 8,106 ಕ್ಕೆ ತಲುಪಿದೆ. ಈ ಪೈಕಿ 2,372 ಸಕ್ರೀಯ ಪ್ರಕರಣಗಳಿವೆ. 5,705 ಮಂದಿ ಗುಣಮುಖರಾಗಿದ್ದಾರೆ ಮತ್ತು 29 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details