ನವದೆಹಲಿ: ಭಾರತದಲ್ಲಿ ಕೊವಿಡ್-19 ಪ್ರಕರಣಗಳ ಏರಿಕೆಯಿಂದ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ದೇಶದ ಎಲ್ಲ ನಗರ ಹಾಗೂ ಪಟ್ಟಣಗಳನ್ನು ಬಂದ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡದಿದ್ದರೆ ನನಗೆ ನಿರಾಶೆಯಾಗುವುದು ಎಂದು ಹೇಳಿದ್ದಾರೆ.
ಕೊವಿಡ್-19: ದೇಶವನ್ನು ಸಂಪೂರ್ಣ ಬಂದ್ ಮಾಡುವಂತೆ ಪಿಎಂ ಮೋದಿಗೆ ಪಿ.ಚಿದಂಬರಂ ಸಲಹೆ - ಕೊವಿಡ್-19 ಸುದ್ದಿ
ದೇಶದ ಎಲ್ಲ ನಗರ ಹಾಗೂ ಪಟ್ಟಣಗಳನ್ನು ಬಂದ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡದಿದ್ದರೆ ನನಗೆ ನಿರಾಶೆಯಾಗುತ್ತದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ
ಕನಿಷ್ಠ 2 ರಿಂದ 4 ವಾರಗಳವರೆಗೆ ದೇಶದ ಎಲ್ಲ ಪಟ್ಟಣಗಳು ಮತ್ತು ನಗರಗಳನ್ನು ಲಾಕ್ ಡೌನ್ ಮಾಡುವಂತೆ ಪಿಎಂ ಮೋದಿ ಘೋಷಿಸಬೇಕು. ಇಲ್ಲವಾದಲ್ಲಿ ನಾನು ನಿರಾಶೆಗೊಳ್ಳುತ್ತೇನೆ. ಲಾಕ್ ಡೌನ್ ಮಾಡುವ ನಗರಗಳ ಸಂಖ್ಯೆ ಕಡಿಮೆಯಾದರೆ ದೇಶವನ್ನೇ ಕುಗ್ಗಿಸುತ್ತದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಭಾರತದಲ್ಲಿ ಕೊವಿಡ್-19 ಪ್ರಕರಣಗಳು ಗಗನಕ್ಕೇರುತ್ತಿದ್ದು, ಕೆಲ ನಗರಗಳನ್ನು ಮಾತ್ರ ಬಂದ್ ಮಾಡುವಂತೆ ಆದೇಶಿಸಿ, ಅನೇಕ ದೈನಂದಿನ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.