ಭೋಪಾಲ್ (ಮಧ್ರಪ್ರದೇಶ):ನಿನ್ನೆ ಒಂದೇ ದಿನ 181 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 938 ಕ್ಕೆ ಏರಿದೆ.
ಇದುವರೆಗೆ ರಾಜ್ಯದ 52 ಜಿಲ್ಲೆಗಳಲ್ಲಿ ಅರ್ಧದಷ್ಟು ಭಾಗವನ್ನು ಕೊರೊನಾ ಆಕ್ರಮಿಸಿದೆ. ಇನ್ನು ನಿನ್ನೆ ವರದಿಯಾದ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಹೊಸ ಜಿಲ್ಲೆಗಳಾದ ಅಗರ್ ಮಾಲ್ವಾ ಮತ್ತು ಅಲಿರಾಜ್‌ಪುರ ಕೂಡ ಸೇರಿವೆ. ಇಂದೋರ್‌ನಲ್ಲಿ 544 ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 117 ಪ್ರಕರಣಗಳು ವರದಿಯಾಗಿವೆ. ಭೋಪಾಲ್‌ನಿಂದ ಒಂಬತ್ತು ಪ್ರಕರಣಗಳು ವರದಿಯಾಗಿದ್ದು, ರಾಜ್ಯ ರಾಜಧಾನಿಯಲ್ಲಿ 167 ಕ್ಕೆ ಕೊರೊನಾ ಪೀಡಿತರ ಸಂಖ್ಯೆ ಏರಿದ್ದು, ಖಾರ್ಗೋನ್‌ನಲ್ಲಿ 22 ಪಾಸಿಟಿವ್ ಪ್ರಕರಣ ಕಂಡುಬಂದಿದ್ದು,ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಇಟ್ಟು 39 ಜನರು ಕೊರೊನಾ ಪೀಡಿತರಾಗಿದ್ದಾರೆ.
ರಾಜ್ಯದಲ್ಲಿನ 53 ಸಾವುಗಳ ಪೈಕಿ 37 ಸಾವುಗಳು ಇಂದೋರ್ನಲ್ಲಿಯೇ ಸಂಭವಿಸಿವೆ. ಈವರೆಗೆ ಭೋಪಾಲ್‌ನಲ್ಲಿ ಐದು, ಉಜ್ಜಯಿನಿಯಲ್ಲಿ ಆರು, ಖಾರ್ಗೋನ್‌ನಲ್ಲಿ ಮೂವರು ಮತ್ತು ಚಿಂದ್ವಾರ ಮತ್ತು ದೇವಾಸ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇನ್ನುಳಿದ ಜಿಲ್ಲೆಗಳಾದ ಮೊರೆನಾ 14, ಜಬಲ್ಪುರ್ 12, ಉಜ್ಜಯಿನಿ 30 (4 ಹೊಸ), ಹೋಶಂಗಾಬಾದ್ 16 (ಒಂದು ಹೊಸ ಪ್ರಕರಣ), ಬಾರ್ವಾನಿ 22 (5 ಹೊಸ ಪ್ರಕರಣ ), ರೈಸನ್ 04, ಗ್ವಾಲಿಯರ್ ಆರು, ಖಾಂಡ್ವಾ 16, ದೇವಾಸ್ 15 (8 ಹೊಸ ಪ್ರಕರಣ), ಶಿಯೋಪುರ್ 3, ವಿದಿಷಾ 13, ಚಿಂದ್ವಾರ 4, ಸತ್ನಾ 2, ಧಾರ್ 3, ಶಿವಪುರಿ 2, ರತ್ನಂ 12 (10 ಹೊಸ ಪ್ರಕರಣ), ಶಾಜಾಪುರ 4, ಮಾಂಡ್‌ಸೌರ್ 2, ಬೆತುಲ್, ಟಿಕಾಮಗ್ರ ಮತ್ತು ಸಾಗರ್‌ನಲ್ಲಿ ತಲಾ ಒಂದು ಪ್ರರಣಗಳು ಈವರೆಗೆ ವರದಿಯಾಗಿವೆ. ನಿನ್ನೆ ಅಗರ್ ಮಾಲ್ವಾದಿಂದ ಮೂರು ಪ್ರಕರಣಗಳ ಕಂಡುಬಂದರೆ 1 ಪ್ರಕರಣ ಅಲಿರಾಜ್‌ಪುರದಿಂದ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶೀಘ್ರವಾಗಿ ವೈದ್ಯಕೀಯ ಪರೀಕ್ಷೆಗಳು ಲಭ್ಯವಾಗುತ್ತಿರುವುದರಿಂದ ಸಂಖ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಇನ್ನೂ ಕೂಡ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.