ಕೋಲ್ಕತ್ತಾ:ನಿನ್ನೆ ಒಂದೇ ದಿನ 476 ಪಾಸಿಟಿವ್ ಕೇಸ್ಗಳು ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿವೆ. ಈ ಮೂಲಕ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 10 ಸಾವಿರದ ಗಡಿ ತಲುಪಿ ಮುನ್ನುಗ್ಗುತ್ತಿದೆ.
ದೀದಿ ನಾಡಲ್ಲೂ 10 ಸಾವಿರಕ್ಕೇರಿದ ಕೊರೊನಾ ಪೀಡಿತರ ಸಂಖ್ಯೆ - ಪಶ್ಚಿಮ ಬಂಗಾಳದಲ್ಲಿ 10 ಸಾವಿರಕ್ಕೇರಿದ ಕೊರೊನಾ ಸಂಖ್ಯೆ,
ಪಶ್ಚಿಮ ಬಂಗಾಳದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ನಿನ್ನೆ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, 10 ಸಾವಿರ ಗಡಿ ದಾಟಿದೆ.
ಸಾಂದರ್ಭಿಕ ಚಿತ್ರ
ಈಗಾಗಲೇ ಮಹಾರಾಷ್ಟ್ರ ಲಕ್ಷದ ಗಡಿ ದಾಟಿದ್ದಾರೆ. ದೆಹಲಿ, ತಮಿಳುನಾಡು, ರಾಜಸ್ಥಾನಗಳಲ್ಲಿ ಕೊರೊನಾ ತಾಂಡವ ನೃತ್ಯ ಮಾಡುತ್ತಿದೆ. ಈ ರಾಜ್ಯಗಳ ಸಾಲಿಗೆ ಈಗ ಪಶ್ಚಿಮ ಬಂಗಾಳವೂ ಸೇರ್ಪಡೆ ಆಗಿದೆ.
ಶುಕ್ರವಾರದ ವರದಿ ಪ್ರಕಾರ ರಾಜ್ಯದಲ್ಲಿ 10,244 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 5,587 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಪಶ್ಚಿಮ ಬಂಗಾಳದಲ್ಲಿ ಇದುವರೆಗೂ 451 ಮಂದಿ ಸಾವನ್ನಪ್ಪಿದ್ದು, ಇನ್ನುಳಿದವರು ಗುಣಮುಖರಾಗಿ ಮನೆ ಸೇರಿದ್ದಾರೆ.