ಕರ್ನಾಟಕ

karnataka

ETV Bharat / bharat

ಗರ್ಭಿಣಿಯರಿಗೆ ಕೋವಿಡ್​-19 ಅಪಾಯದ ಪ್ರಮಾಣ ಎಷ್ಟು? - ಕೋವಿಡ್​-19 ಪರಿಣಾಮ

ಗರ್ಭಿಣಿಯರ ಆರೋಗ್ಯದ ಮೇಲೆ ಕೋವಿಡ್​ ಪರಿಣಾಮಗಳ ಬಗೆಗಿನ ಮಾಹಿತಿ ಸೀಮಿತವಾಗಿದೆ. ಅವರಿಗೆ ಇನ್ನುಳಿದವರಿಗಿಂತ ಹೆಚ್ಚು ಅಪಾಯವಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಕೊರೊನಾ ವೈರಸ್​ ಹರಡುತ್ತಿರುವ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗಲೇ ಕೂಡದು ಹಾಗೂ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಮೀನಾ.

COVID-19: Are Pregnant women at risk?
COVID-19: Are Pregnant women at risk?

By

Published : Apr 14, 2020, 9:32 PM IST

ಹೈದರಾಬಾದ್:ಕೊರೊನಾ ವೈರಸ್​ನ ವ್ಯಾಪಕ ಹರಡುವಿಕೆಯು ವಿಶ್ವಾದ್ಯಂತ ಗರ್ಭಿಣಿಯರಿಗೆ ಹೆಚ್ಚಿನ ಆತಂಕ ಮೂಡಿಸಿದೆ. ಗರ್ಭಿಣಿಯರ ಆರೋಗ್ಯದ ಮೇಲೆ ಕೋವಿಡ್​-19 ಪರಿಣಾಮಗಳ ಕುರಿತು ಈವರೆಗೂ ನಿಖರ ಮಾಹಿತಿಗಳು ಲಭ್ಯವಿಲ್ಲ.

ಗರ್ಭಿಣಿಯರ ಆರೋಗ್ಯದ ಮೇಲೆ ಕೋವಿಡ್​ ಪರಿಣಾಮಗಳ ಬಗೆಗಿನ ಮಾಹಿತಿ ಸೀಮಿತವಾಗಿದೆ. ಅವರಿಗೆ ಇನ್ನುಳಿದವರಿಗಿಂತ ಹೆಚ್ಚು ಅಪಾಯವಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಗರ್ಭ ಧರಿಸಿದಾಗ ಮಹಿಳೆಯರ ಶರೀರ ಹಾಗೂ ರೋಗ ನಿರೋಧಕ ಶಕ್ತಿಗಳಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಆದರೂ ಇತರರಿಗಿಂತ ಗರ್ಭಿಣಿಯರಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ವೈದ್ಯರು.

ಈ ಕುರಿತು ಮಾಹಿತಿ ನೀಡಿದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಮೀನಾ, ಪ್ರಸ್ತುತ ಸ್ಥಿತಿಯಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಅಪಾಯವಿಲ್ಲ. ಆದರೆ ನಿಖರವಾಗಿ ಈಗಲೇ ಏನನ್ನೂ ಹೇಳಲು ಆಗಲ್ಲ. ಸ್ವೈನ್ ಫ್ಲೂ ಬಂದಾಗ ಗರ್ಭಿಣಿಯರಿಗೆ ಅಪಾಯದ ಮಟ್ಟ ಜಾಸ್ತಿ ಇತ್ತು. ಒಟ್ಟಾರೆಯಾಗಿ ಏನೇ ಆದರೂ ಇತರರಿಗಿಂತ ಗರ್ಭಿಣಿಯರು ಹೆಚ್ಚು ಜಾಗ್ರತೆ ವಹಿಸುವುದು ಅಗತ್ಯ ಎಂದು ಹೇಳಿದರು.

ಗರ್ಭಿಣಿ ಮಹಿಳೆಗೆ ಸೋಂಕು ತಗುಲಿದರೆ ಅದು ಮಗುವಿಗೆ ವರ್ಗಾವಣೆ ಆಗುತ್ತದೆಯಾ ಎಂಬ ಬಗ್ಗೆಯೂ ನಿಖರತೆ ಇಲ್ಲ. ಚೀನಾದಲ್ಲಿ ಇಂಥದೇ ಪ್ರಕರಣಗಳ ಸಂದರ್ಭದಲ್ಲಿ ಗರ್ಭಾಶಯದಲ್ಲಿದ್ದ ಮಗುವಿಗೆ ಸೋಂಕು ತಗುಲಿರಲಿಲ್ಲ. ಆದರೆ, ಮಗು ಗರ್ಭದಿಂದ ಆಚೆ ಬಂದ ತಕ್ಷಣ ಸೋಂಕು ತಗಲುವ ಅಪಾಯ ಇದ್ದೇ ಇದೆ ಎನ್ನುತ್ತಾರೆ ಡಾ. ಮೀನಾ.

ಕೊರೊನಾ ವೈರಸ್​ ಹರಡುತ್ತಿರುವ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗಲೇಕೂಡದು ಹಾಗೂ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಈ ಕೆಳಗೆ ನೀಡಲಾದ ಸೂಚನೆಗಳನ್ನು ಪಾಲಿಸಬೇಕೆಂದು ಡಾ. ಮೀನಾ ಸಲಹೆ ನೀಡುತ್ತಾರೆ.

- ರೆಗ್ಯೂಲರ್​ ಚೆಕಪ್​ಗಾಗಿ ಡಾಕ್ಟರ್​ ಬಳಿ ಹೋಗುವುದು ಬೇಡ. ಫೋನ್ ಅಥವಾ ವಿಡಿಯೋ ಕಾಲ್ ಮೂಲಕವೇ ಡಾಕ್ಟರ್ ಸಲಹೆ ಪಡೆದರೆ ಸಾಕು.

- 9, 12 ಮತ್ತು 32 ನೇ ವಾರಗಳಲ್ಲಿ ಡಾಕ್ಟರ್ ಬಳಿಗೆ ಹೋಗಿ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲೇಬೇಕು.

- ಒಂದು ವೇಳೆ ನಿಮಗೆ ಸೋಂಕು ತಗುಲಿದ್ದರೆ ತಕ್ಷಣ ವೈದ್ಯರಿಗೆ ತಿಳಿಸಿ ಹಾಗೂ ಸಲಹೆಯಂತೆ ನಡೆದುಕೊಳ್ಳಿ.

- ತೀರಾ ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ.

- ಆಸ್ಪತ್ರೆಗೆ ಹೋದಾಗ ಎಲ್ಲ ರೀತಿಯ ಸ್ವಚ್ಛತಾ ಕ್ರಮಗಳನ್ನು ತಪ್ಪದೇ ಪಾಲಿಸಿ.

- ಆಸ್ಪತ್ರೆಯಲ್ಲಿನ ಬಾಗಿಲು, ಸರಳು ಮುಂತಾದ ಯಾವುದೇ ವಸ್ತುಗಳನ್ನು ಮುಟ್ಟಬೇಡಿ.

- ಕೈಗಳನ್ನು ಸ್ಯಾನಿಟೈಸರ್​ನಿಂದ ತೊಳೆದುಕೊಳ್ಳಿ.

- ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬೇಡಿ.

- ಸಾಮಾಜಿಕ ಅಂತರ ಪಾಲಿಸುವುದನ್ನು ಮರೆಯಬೇಡಿ.

ABOUT THE AUTHOR

...view details