ಕರ್ನಾಟಕ

karnataka

ETV Bharat / bharat

ನಾಳೆಯಿಂದ ದೆಹಲಿ ಏಮ್ಸ್​ನಲ್ಲಿ ಕೊವಾಕ್ಸಿನ್ ​ಮಾನವ ಪ್ರಯೋಗ ಆರಂಭ - ಕೊವಾಕ್ಸಿನ್​ ಮಾನವ ಪ್ರಯೋಗ

ದೆಹಲಿಯ ಏಮ್ಸ್​(ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಭಾರತ್ ಬಯೋಟೆಕ್ ಮತ್ತು ಜಿಡಸ್​ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಕೋವಿಡ್​​ ಲಸಿಕೆ ಕೊವಾಕ್ಸಿನ್​ನ ಮಾನವ ಪ್ರಯೋಗವು ನಾಳೆಯಿಂದ ನಡೆಯಲಿದೆ.

AIIMS
ನಾಳೆಯಿಂದ ದೆಹಲಿ ಏಮ್ಸ್​ನಲ್ಲಿ ಕೊವಾಕ್ಸಿನ್ ​ಮಾನವ ಪ್ರಯೋಗ ಆರಂಭ

By

Published : Jul 19, 2020, 2:59 AM IST

ನವದೆಹಲಿ : ಭಾರತ್ ಬಯೋಟೆಕ್ ಮತ್ತು ಜಿಡಸ್​ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಕೋವಿಡ್​​ ಲಸಿಕೆ ಕೊವಾಕ್ಸಿನ್​ನ ಮಾನವ ಕ್ಲಿನಿಕಲ್ ಪ್ರಯೋಗವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ನಾಳೆಯಿಂದ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಏಮ್ಸ್​ ಪ್ರಾಧ್ಯಾಪಕ ಸಂಜಯ್​ ರೈ, ಕೊವಾಕ್ಸಿನ್‌ನ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಏಮ್ಸ್ ಎಥಿಕ್ಸ್ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. ಸೋಮವಾರದಿಂದ(ನಾಳೆ) ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಆರೋಗ್ಯವಂತ ಹಾಗೂ ಕೋವಿಡ್​-19 ಇಲ್ಲದವರನ್ನು ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು. 18ರಿಂದ 55 ವರ್ಷ ವಯೋಮಾನದವರ ಮೇಲೆ ಪ್ರಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಯೋಗದಲ್ಲಿ ಭಾಗವಹಿಸಲು ಇಚ್ಚಿಸುವ ಯಾವುದೇ ಆರೋಗ್ಯವಂತ ವ್ಯಕ್ತಿಯು Ctaiims.covid19@gmail.comಗೆ ಇಮೇಲ್ ಕಳುಹಿಸಬಹುದು ಅಥವಾ SMS ಕಳುಹಿಸಬಹುದು ಅಥವಾ 7428847499ಗೆ ಕರೆ ಮಾಡಬಹುದು. ಮೊದಲ ಮತ್ತು ಎರಡನೇ ಹಂತದಲ್ಲಿ 375 ಸ್ವಯಂಸೇವಕರಲ್ಲಿ 100 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಈಗಾಗಲೇ ಕೆಲವು ಸ್ವಯಂಸೇವಕರನ್ನು ವಿಚಾರಣೆಗೆ ನೋಂದಾಯಿಸಿದ್ದೇವೆ. ಸೋಮವಾರದಿಂದ, ನಮ್ಮ ತಂಡವು ಅವರಿಗೆ ಲಸಿಕೆ ನೀಡುವ ಮೊದಲು ಅವರ ಆರೋಗ್ಯ ತಪಾಸಣೆಯನ್ನು ಪ್ರಾರಂಭಿಸುತ್ತೇವೆ ಎಂದು ರೈ ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಕೋವಾಕ್ಸಿನ್‌ ಪ್ರಯೋಗವನ್ನು ದೇಶದ 12 ಕಡೆಗಳಲ್ಲಿ ನಡೆಸಲಿದೆ.

ABOUT THE AUTHOR

...view details