ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನವದೆಹಲಿಯ ಏಮ್ಸ್ ಆಸ್ಪತ್ರೆ ಸಿಬ್ಬಂದಿ ತಾವೇ ತಯಾರಿಸಿದ ಸ್ಯಾನಿಟೈಜರ್ ಮತ್ತು ಮಾಸ್ಕ್ಗಳನ್ನು ಬಳಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಸ್ಯಾನಿಟೈಜರ್ ಮತ್ತು ಮಾಸ್ಕ್ಗಳ ಕೊರತೆ ಇದೆ. ಹೀಗಾಗಿ ಮೈಕ್ರೋಬಯೋಲಜಿ ವಿಭಾಗದ ವೈದ್ಯರು ತಮ್ಮಲ್ಲಿ ಲಭ್ಯವಿರುವ ಲ್ಯಾಬ್ಅನ್ನು ಬಳಸಿಕೊಂಡು ಹ್ಯಾಂಡ್ ಸ್ಯಾನಿಟೈಜರ್ ಮತ್ತು ಮಾಸ್ಕ್ಗಳನ್ನು ತಯಾರು ಮಾಡುತ್ತಿದ್ದಾರೆ.
ಆಸ್ಪತ್ರೆಯಿಂದ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ನೀಡಲಾಗಿದೆ. ಆದ್ರೆ ಸ್ವಲ್ಪಮಟ್ಟಿಗೆ ಕೊರತೆ ಇರುವುದರಿಂದ ಆಸ್ಪತ್ರೆಯಲ್ಲೇ ಅವನ್ನು ತಯಾರಿಸಲಾಗುತ್ತದೆ. ಮಾಸ್ಕ್ಗಳ ಹೊರತಾಗಿ, ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ಗಳನ್ನು ತಯಾರಿಸಲಾಗಿದೆ ಎಂದು ಸೋಂಕು ನಿಯಂತ್ರಣ ವಿಭಾಗದ ವೈದ್ಯರು ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ 20 ಲೀಟರ್ನಷ್ಟು ಹ್ಯಾಂಡ್ ಸ್ಯಾನಿಟೈಜರ್ ಮತ್ತು 100ಕ್ಕೂ ಪ್ಲಾಸ್ಟಿಕ್ ಮಿಶ್ರಿತ ಮಾಸ್ಕ್ಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳನ್ನು ಮತ್ತಷ್ಟು ರಕ್ಷಣಾ ವಸ್ತುಗಳನ್ನು ತಯಾರಿಸಲಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.