ಕರ್ನಾಟಕ

karnataka

ETV Bharat / bharat

COVID-19: ಕೇರಳದಲ್ಲಿ 81,000 ಶಿಕ್ಷಕರಿಗೆ ಆನ್‌ಲೈನ್‌ನಲ್ಲಿ ತರಬೇತಿ - ಕರೋನವೈರಸ್ ಕುರಿತಂತೆ ಶಿಕ್ಷಕರಿಗೆ ನಿರ್ದಿಷ್ಟ ತರಬೇತಿ

ಕೊರೊನಾ ವೈರಸ್ ಕುರಿತಂತೆ ಶಿಕ್ಷಕರಿಗೆ ನಿರ್ದಿಷ್ಟ ತರಬೇತಿಯನ್ನು ಕಡಿಮೆ ಸಮಯದಲ್ಲಿ ನೀಡುವ ಉದ್ದೇಶದಿಂದ ಕೇರಳದಲ್ಲಿ 1000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮೂರು ಬ್ಯಾಚ್‌ಗಳಲ್ಲಿ ಈ ತರಬೇತಿ ನೀಡಲು ನಿರ್ಧರಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 25 ಶಿಕ್ಷಕರು ಮತ್ತು ಇಬ್ಬರು ತರಬೇತುದಾರರು ಇದ್ದಾರೆ ಎಂದು ಕೈಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಅನ್ವರ್ ಸದಾತ್ ತಿಳಿಸಿದ್ದಾರೆ.

Kerala
COVID-19: ಕೇರಳದಲ್ಲಿ 81,000 ಶಿಕ್ಷಕರಿಗೆ ಆನ್‌ಲೈನ್‌ನಲ್ಲಿ ತರಬೇತಿ

By

Published : Mar 14, 2020, 2:59 PM IST

ತಿರುವನಂತಪುರಂ:ಅವಶ್ಯಕತೆಯು ಆವಿಷ್ಕಾರದ ತಾಯಿ ಎಂಬ ಹಳೆಯ ಮಾತಿದೆ. ಹಾಗಾಗಿ ಶಿಕ್ಷಣಕ್ಕಾಗಿ ಕೇರಳ ಮೂಲಸೌಕರ್ಯ ಮತ್ತು ತಂತ್ರಜ್ಞಾನ (ಕೈಟ್) ( Kerala Infrastructure and Technology for Education) ಶನಿವಾರ ರಾಜ್ಯದ 81,000 ಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರಿಗೆ ಆನ್‌ಲೈನ್​ನಲ್ಲಿ ನಿರ್ದಿಷ್ಟ ಐಟಿ ತರಬೇತಿಯನ್ನು ನೀಡಲು ನಿರ್ಧರಿಸಿದೆ.

ಸಂಪೂರ್ಣ ಡಿಜಿಟಲ್ ಕಾರ್ಯವಿಧಾನವನ್ನು ಬಳಸಿಕೊಂಡು ಶಿಕ್ಷಕರಿಗೆ ನಿರ್ದಿಷ್ಟ ತರಬೇತಿಯನ್ನು ಅಲ್ಪಾವಧಿಯಲ್ಲಿಯೇ ನಡೆಸುತ್ತಿರುವುದು ಭಾರತದಲ್ಲಿ ಇದೇ ಮೊದಲು.1000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮೂರು ಬ್ಯಾಚ್​ಗಳನ್ನ ಮಾಡಿ ಈ ತರಬೇತಿ ನೀಡಲು ಯೋಜಿಸಿದ್ದಾರೆ. ಪ್ರತಿ ಕೇಂದ್ರದಲ್ಲಿ 25 ಶಿಕ್ಷಕರು ಮತ್ತು ಇಬ್ಬರು ತರಬೇತುದಾರರು ಇದ್ದಾರೆ ಎಂದು ಕೈಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಅನ್ವರ್ ಸದಾತ್ ತಿಳಿಸಿದ್ದಾರೆ.

"ಆದರೆ COVID-19 ಪ್ರೋಟೋಕಾಲ್‌ಗಳ ಕಾರಣದಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಈಗ ಮುಚ್ಚಲಾಗಿದ್ದು, ಆನ್‌ಲೈನ್​ ಮೂಲಕವೇ ಶಾಲೆಗಳಲ್ಲಿನ ಎಲ್ಲ ಹೈಟೆಕ್ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಐದು ದಿನಗಳಲ್ಲಿ ತರಬೇತಿ ಪೂರ್ಣಗೊಳ್ಳುತ್ತದೆ" ಎಂದು ಸದಾತ್ ಹೇಳಿದರು.

ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದರೂ, ಸಿಬ್ಬಂದಿ ಶಾಲೆಗೆ ಬರಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details