ಜೈಪುರ(ರಾಜಸ್ಥಾನ):ಕೊರೊನಾ ಸೋಂಕಿಗೆ ರಾಜಸ್ಥಾನದಲ್ಲಿ ಇಂದು ಐದು ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 82 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಬೆಳಗಾಗುವುದರೊಳಗೆ ರಾಜ್ಯದಲ್ಲಿ 38 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,099 ಕ್ಕೇರಿದೆ.
ಇಂದು ಸಾವನ್ನಪ್ಪಿದ ಐದು ಪ್ರಕರಣಗಳು ರಾಜಧಾನಿ ಜೈಪುರದಲ್ಲಿ ದಾಖಲಾಗಿದೆ. ಈವರೆಗೆ ಜೈಪುರ ಒಂದರಲ್ಲೇ 49 ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ರಾಜ್ಯದ ಒಟ್ಟು 3,099 ಕೋವಿಡ್ -19 ಪ್ರಕರಣಗಳಲ್ಲಿ ಈವರೆಗೆ 983 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 1,577 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಪುರದಲ್ಲಿ ಅತಿ ಹೆಚ್ಚು, ಅಂದರೆ 1,036 ಪ್ರಕರಣಗಳು ವರದಿಯಾಗಿದ್ದು, ಜೋಧ್‌ಪುರದಲ್ಲಿ 725 ಪ್ರಕರಣಗಳು ದಾಖಲಾಗಿವೆ.