ಹೈದರಾಬಾದ್ ( ತೆಲಂಗಾಣ ): ತೆಲಂಗಾಣದಲ್ಲಿ ಮಂಗಳವಾರ 42 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,634ಕ್ಕೆ ಏರಿಕೆಯಾಗಿದೆ.
ತೆಲಂಗಾಣದಲ್ಲಿ ಮಂಗಳವಾರ 42 ಕೊರೊನಾ ಕೇಸ್ ಪತ್ತೆ: ಸೋಂಕಿತರ ಸಂಖ್ಯೆ 1,634ಕ್ಕೆ ಏರಿಕೆ - ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ 1,634 ಕ್ಕೆ ಏರಿಕೆ
ತೆಲಂಗಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,634ಕ್ಕೆ ಏರಿಕೆಯಾಗಿದ್ದು, ಮಂಗಳವಾರ 42 ಹೊಸ ಪ್ರಕರಣಗಳು ದಾಖಲಾಗಿವೆ.
ತೆಲಂಗಾಣದಲ್ಲಿ ಮಂಗಳವಾರ 42 ಪಾಸಿಟಿವ್
ರಾಜ್ಯದಲ್ಲಿ ಇದುವರೆಗೆ 1,634 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,011 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 585 ಸಕ್ರಿಯ ಪ್ರಕರಣಗಳಿದ್ದು, 38 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಮಂಗಳವಾರದವರೆಗೆ ಒಟ್ಟು 1,01,139 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 39,174 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು 58,802 ಪ್ರಕರಣಗಳು ಸಕ್ರಿಯವಾಗಿದ್ದು, 3,163 ಜನ ಮೃತಪಟ್ಟಿದ್ದಾರೆ.