ನವದೆಹಲಿ: ಮಾರಕ ಕೊರೊನಾ ವೈರಸ್‌ಗೆ ಲಸಿಕೆ ಸಂಶೋಧಿಸುತ್ತಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯು ಉತ್ತಮ ಫಲಿತಾಂಶ ತೋರಿಸುತ್ತಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಭಾರತ್ ಬಯೋಟೆಕ್ ನಡುವಿನ ಸಹಭಾಗಿತ್ವದ ಮೂಲಕ ಅಭಿವೃದ್ಧಿಪಡಿಸಿದ ದೇಶೀಯ ಕೋವಿಡ್ -19 ಲಸಿಕೆಯ ಕೊವಾಕ್ಸಿನ್ನ ಮೊದಲ ಹಂತದ ಪ್ರಯೋಗದ ಫಲಿತಾಂಶಗಳು ಲಸಿಕೆಯು ಸುರಕ್ಷಿತ ಮತ್ತು ಇಮ್ಯುನೊಜೆನಿಕ್ ಎಂಬುದನ್ನು ದೃಢಪಡಿಸಿದೆ. ಪ್ರಯೋಗದ ಸಮಯದಲ್ಲಿ ಒಂದು ಪ್ರತಿಕೂಲ ಘಟನೆ ವರದಿಯಾಗಿದೆ. ಆದರೆ, ಇದು ಲಸಿಕೆಗೆ ಸಂಬಂಧಿಸಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.