ಕರ್ನಾಟಕ

karnataka

ETV Bharat / bharat

ಕೋವಿಡ್-19 ಮಧ್ಯೆ ಭಾರತದ ನ್ಯಾಯಾಲಯಗಳ ಇ-ವಿಚಾರಣೆ ಶ್ಲಾಘಿಸಿದ : ರವಿಶಂಕರ್ ಪ್ರಸಾದ್ - ಕೋವಿಡ್​-19 ಸಾಂಕ್ರಾಮಿಕ

ಕೋವಿಡ್​-19 ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ವಿವಿಧ ಅಧೀನ ನ್ಯಾಯಾಲಯಗಳಲ್ಲಿ ಅನುಸರಿಸಲಾದ ಡಿಜಿಟಲ್ ಮತ್ತು ವರ್ಚುವಲ್ ವಿಚಾರಣೆ ವಿಧಾನವನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾನುವಾರ ಶ್ಲಾಘಿಸಿದ್ದಾರೆ.

Courts in India have rapidly adopted digital technology
ಕೋವಿಡ್-19 ಮಧ್ಯೆ ಭಾರತದ ನ್ಯಾಯಾಲಯಗಳ ಇ-ವಿಚಾರಣೆ ಶ್ಲಾಘಿಸಿದ: ರವಿಶಂಕರ್ ಪ್ರಸಾದ್

By

Published : Jul 19, 2020, 8:14 PM IST

ನವದೆಹಲಿ:ಕೋವಿಡ್​-19 ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳು ಮತ್ತು ವಿವಿಧ ಅಧೀನ ನ್ಯಾಯಾಲಯಗಳಲ್ಲಿ ಅನುಸರಿಸಲಾದ ಡಿಜಿಟಲ್ ಮತ್ತು ವರ್ಚುವಲ್ ವಿಚಾರಣೆ ವಿಧಾನವನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾನುವಾರ ಶ್ಲಾಘಿಸಿದ್ದಾರೆ.

'ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ ನ್ಯಾಯಾಲಯಗಳು ಡಿಜಿಟಲ್ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಂಡಿವೆ. ಹಾಗೆಯೇ ಲಕ್ಷಾಂತರ ಪ್ರಕರಣಗಳನ್ನು ನಿರ್ವಹಿಸಿವೆ. ಡಿಜಿಟಲ್ ವಿಚಾರಣೆ ಮೂಲಕ ಸುಪ್ರೀಂಕೋರ್ಟ್- 7,800 ಪ್ರಕರಣ, ಹೈಕೋರ್ಟ್‌ಗಳಲ್ಲಿ 1.75 ಲಕ್ಷ ಪ್ರಕರಣ, ಅಧೀನ ನ್ಯಾಯಾಲಯಗಳಲ್ಲಿ- 7.34 ಲಕ್ಷ ಪ್ರಕರಣ ಪರಿಹಾರವಾಗಿವೆ' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಪ್ರಸಾದ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು, ವರ್ಚುವಲ್ ವಿಚಾರಣೆಗಳಲ್ಲಿ ನ್ಯಾಯಾಲಯಗಳು ತೆಗೆದುಕೊಂಡ ಪ್ರಕರಣ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details