ಕರ್ನಾಟಕ

karnataka

ETV Bharat / bharat

ಸ್ಮೃತಿ ಇರಾನಿ ವಿರುದ್ಧದ ಪ್ರಕರಣದ ವಿಚಾರಣೆ ಜ.23ರಂದು - ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇನ್ನಿಬ್ಬರ ವಿರುದ್ಧ ಶೂಟರ್ ವರ್ತಿಕಾ ಸಿಂಗ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕವನ್ನು ಜನವರಿ 23ರಂದು ಉತ್ತರ ಪ್ರದೇಶ ನ್ಯಾಯಾಲಯ ನಿಗದಿಪಡಿಸಿದೆ.

smrithi irani
smrithi irani

By

Published : Jan 16, 2021, 9:48 PM IST

ಸುಲ್ತಾನಪುರ (ಉತ್ತರ ಪ್ರದೇಶ): ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ಮಾಡಲು ಹಣಕ್ಕಾಗಿ ಒತ್ತಾಯಿಸಿದ ಆರೋಪದ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇನ್ನಿಬ್ಬರ ವಿರುದ್ಧ ಶೂಟರ್ ವರ್ತಿಕಾ ಸಿಂಗ್ ಸಲ್ಲಿಸಿದ್ದ ದೂರಿನ ವಿಚಾರಣೆಯ ಮುಂದಿನ ದಿನಾಂಕವನ್ನು ಜನವರಿ 23ರಂದು ಉತ್ತರ ಪ್ರದೇಶ ನ್ಯಾಯಾಲಯ ನಿಗದಿಪಡಿಸಿದೆ.

"ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ವರ್ತಿಕಾ ಸಿಂಗ್ ಈ ಹಿಂದೆ ಹೇಳಿದ್ದಾರೆ.

ಸಚಿವರಿಗೆ ಹತ್ತಿರವಿರುವ ಜನರು ತನಗೆ ನಕಲಿ ಪತ್ರವೊಂದನ್ನು ನೀಡಿದ್ದು, ಅದರಲ್ಲಿ ತಮ್ಮನ್ನು ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಗುವುದು ಎಂದು ಉಲ್ಲೇಖವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸಚಿವರ ಇಬ್ಬರು ಸಹಾಯಕರಾದ ವಿಜಯ್ ಗುಪ್ತಾ ಮತ್ತು ರಜನೀಶ್ ಸಿಂಗ್ ಮೊದಲಿಗೆ 1 ಕೋಟಿ ರೂ. ಬೇಡಿಕೆ ಇಟ್ಟರು ಮತ್ತು ನಂತರ ಅದನ್ನು 25 ಲಕ್ಷ ರೂ.ಗೆ ಇಳಿಸಿದರು ಎಂದು ವರ್ತಿಕಾ ಸಿಂಗ್ ಆರೋಪಿಸಿದ್ದರು.

ABOUT THE AUTHOR

...view details