ನವದೆಹಲಿ: ಇಸ್ರೋ ಹಾಗೂ ಇಸ್ರೋ ವಿಜ್ಞಾನಿಗಳ ಬಗ್ಗೆ ಭಾರತವೇ ಹೆಮ್ಮೆ ಪಡುತ್ತದೆ. ಚಂದ್ರನನ್ನು ತಲುಪುವ ಇಸ್ರೋ ಉದ್ದೇಶವು ಖಂಡಿತಾ ಯಶಸ್ವಿಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಸ್ರೋಗೆ ಶುಭ ಹಾರೈಸಿದ್ದಾರೆ.
ನಿಮ್ಮ ಧೈರ್ಯ ಹಾಗೂ ಬದ್ಧತೆ ಮುಂದಿನ ಚಂದ್ರಯಾನಕ್ಕೆ ಸ್ಪೂರ್ತಿ: ರಾಜನಾಥ್ ಸಿಂಗ್ - Chandrayaan 2, Chandrayaan 2 moon landing, Chandrayaan 2 landing on moon, chandrayaan 2 on Twitter, latest Chandrayaan 2 news, chandrayaan 2 twitter in kannada, chandrayaan 2 meme, chandrayaan 2 twitter meme, ಚಂದ್ರಯಾನ 2, ಟ್ವಿಟ್ಟರ್ನಲ್ಲಿ ಚಂದ್ರಯಾನ 2 ಲ್ಯಾಂಡಿಂಗ್, ಚಂದ್ರಯಾನ 2 ಸುದ್ದಿ, ಚಂದ್ರಯಾನ 2 ಲ್ಯಾಂಡಿಂಗ್ ಸುದ್ದಿ, ಚಂದ್ರಯಾನ 2 ಲ್ಯಾಂಡಿಂಗ್ ಟ್ವೀಟ್, ಚಂದ್ರಯಾನ 2 ಅಪ್ಡೇಟ್
ಟ್ವೀಟ್ ಮೂಲಕ ಇಸ್ರೋಗೆ ಶುಭಾಶಯ ತಿಳಿಸಿ ವಿಜ್ಞಾನಿಗಳ ಬೆನ್ನು ತಟ್ಟಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಜ್ಞಾನಿಗಳ ಧೈರ್ಯ ಮತ್ತು ಬದ್ಧತೆಗೆ ಭವಿಷ್ಯದಲ್ಲಿ ಖಂಡಿತಾ ಯಶಸ್ಸು ಸಿಗಲಿದೆ. ಇಸ್ರೋದ ಮುಂದಿನ ಪ್ರಯತ್ನದಲ್ಲಿ ಭರ್ಜರಿ ಯಶಸ್ಸು ಸಿಗಲಿ ಎಂದು ಧೈರ್ಯ ತುಂಬಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ಟ್ವೀಟ್ ಮೂಲಕ ಇಸ್ರೋಗೆ ಶುಭಾಷಯ ತಿಳಿಸಿ ವಿಜ್ಞಾನಿಗಳ ಬೆನ್ನು ತಟ್ಟಿರುವ ರಾಜನಾಥ್ ಸಿಂಗ್, ವಿಜ್ಞಾನಿಗಳ ಧೈರ್ಯ ಮತ್ತು ಬದ್ಧತೆಗೆ ಭವಿಷ್ಯದಲ್ಲಿ ಖಂಡಿತಾ ಯಶಸ್ಸು ಸಿಗಲಿದೆ. ಇಸ್ರೋದ ಮುಂದಿನ ಪ್ರಯತ್ನದಲ್ಲಿ ಭರ್ಜರಿ ಯಶಸ್ಸು ಸಿಗಲಿ ಎಂದು ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.
ಇಂದು ನಸುಕಿನ ಜಾವ ಚಂದ್ರಯಾನ-2 ವಿಕ್ರಂ ಲ್ಯಾಂಡರ್, ಚಂದ್ರನ ಬಳಿ ಸಾಗಿ ಕೇವಲ 2.1 ಕಿ. ಮೀ ದೂರದಲ್ಲಿ ಇಸ್ರೋ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ಆ ಬಳಿಕ ಇಸ್ರೋ ಅಧ್ಯಕ್ಷ ಕೆ. ಶಿವನ್ ಖುದ್ದು ಇದನ್ನು ತಿಳಿಸಿದ್ದರು.